Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Bollywood / ವಿರಾಟ್ ಮತ್ತು ಅನುಷ್ಕಾ ನಿಶ್ಚಿತಾರ್ಥದ ಸುದ್ದಿ : ಗೊಂದಲಕ್ಕೆ ತೆರೆ ಎಳೆದ ಕೊಹ್ಲಿ

ವಿರಾಟ್ ಮತ್ತು ಅನುಷ್ಕಾ ನಿಶ್ಚಿತಾರ್ಥದ ಸುದ್ದಿ : ಗೊಂದಲಕ್ಕೆ ತೆರೆ ಎಳೆದ ಕೊಹ್ಲಿ

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿಶ್ಚಿತಾರ್ಥ ಜನವರಿ 1ರಂದು ನಡೆಯುತ್ತದೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಈ ಸುದ್ದಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ. ಟ್ವಿಟರ್‍ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿರಾಟ್ ಕೊಹ್ಲಿ `ನಾವು ನಿಶ್ಚಿತಾರ್ಥ ಆಗಿಲ್ಲ. ಹಾಗೊಂದು ವೇಳೆ ನಮ್ಮ ನಿಶ್ಚಿತಾರ್ಥ ನಡೆಯುವುದಾದರೆ ಕದ್ದು ಮುಚ್ಚಿ ನಿಶ್ಚಿತಾರ್ಥ ಮಾಡಿಕೊಳ್ಳುವುದಿಲ್ಲ. ಎಲ್ಲರಿಗೆ ತಿಳಿಸುತ್ತೇವೆ’ ಎಂದು ವಿರಾಟ್ ಹೇಳಿಕೊಂಡಿದ್ದಾರೆ. ಹರಿದ್ವಾರದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ. ಇವರ ನಿಶ್ಚಿತಾರ್ಥಕ್ಕೆ ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಮತ್ತು ಅನಿಲ್ ಅಂಬಾನಿ ಈಗಾಗಲೇ ಅಲ್ಲಿಗೆ ಬಂದಿದ್ದಾರೆ. ಇವರಿಬ್ಬರು ಹೊಸವರ್ಷವನ್ನು ಕೂಡಾ ಅಲ್ಲೇ ಆಚರಿಸಿಕೊಳ್ಳುತ್ತಾರೆ ಎಂದೇ ಹೇಳಲಾಗುತ್ತಿತ್ತು. ಅಲ್ಲದೆ, ಇದಕ್ಕೆ ಸರಿಯಾಗಿ ವಿರಾಟ್ ಮತ್ತು ಅನುಷ್ಕಾ ಅಲ್ಲೇ ಒಂದು ಆಶ್ರಮಕ್ಕೂ ಹೋಗಿ ಬಂದಿದ್ದರು. ಈ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!