Friday , September 21 2018
ಕೇಳ್ರಪ್ಪೋ ಕೇಳಿ
Home / News NOW / ಮೂಡಾ ಹಗರಣ ಬಯಲಿಗೆಳೆದ ಆರ್‍ಟಿಐ ಕಾರ್ಯಕರ್ತನ ಕಗ್ಗೊಲೆ…?

ಮೂಡಾ ಹಗರಣ ಬಯಲಿಗೆಳೆದ ಆರ್‍ಟಿಐ ಕಾರ್ಯಕರ್ತನ ಕಗ್ಗೊಲೆ…?

ಮಂಡ್ಯ : ಮೈಸೂರಿನ ಮೂಡಾ ಹಗರಣ ಬಯಲು ಮಾಡಿದ್ದ ಆರ್‍ಟಿಐ ಕಾರ್ಯಕರ್ತ ಶ್ರೀನಾಥ್(30) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದ ಬಳಿಯ ಕಾವೇರಿ ತಡದಲ್ಲಿ ಇವರ ಶವ ಇವತ್ತು ಪತ್ತೆಯಾಗಿತ್ತು. ಬೆಳಗ್ಗೆ ಈ ಶವದ ಗುರುತು ಪತ್ತೆ ಆಗಿರಲಿಲ್ಲ. ಹೀಗಾಗಿ, ಪೊಲೀಸರು ಅಪರಿಚಿತ ವ್ಯಕ್ತಿ ಸಾವು ಎಂಬ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಸಂಜೆ ವೇಳೆಗೆ ಈ ಶವ ಶ್ರೀನಾಥ್ ಅವರದ್ದು ಎಂದು ಗೊತ್ತಾಗಿದೆ.

ಮೈಸೂರಿನ ರಾಜರಾಜೇಶ್ವರಿ ನಗರದ ನಿವಾಸಿಯಾಗಿದ್ದ ಶ್ರೀನಾಥ್ ನಿನ್ನೆಯಿಂದ ನಾಪತ್ತೆಯಾಗಿದ್ದರು. ಶ್ರೀನಾಥ್ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು.

ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಆರ್‍ಟಿಐ ಕಾರ್ಯಕರ್ತ ಶ್ರೀನಾಥ್ ಮೂಡಾದ ಹಗರಣಗಳನ್ನು ಬಯಲಿಗೆಳೆದಿದ್ದರು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!