Monday , June 25 2018
ಕೇಳ್ರಪ್ಪೋ ಕೇಳಿ
Home / Sandalwood / ಮಾಸ್ತಿಗುಡಿ ಚಿತ್ರ ತಂಡಕ್ಕಿದ್ದ ನಿರ್ಬಂಧ ತೆರವು : ಚಿತ್ರೀಕರಣ ಮುಂದುವರಿಕೆಗೆ ಅಸ್ತು

ಮಾಸ್ತಿಗುಡಿ ಚಿತ್ರ ತಂಡಕ್ಕಿದ್ದ ನಿರ್ಬಂಧ ತೆರವು : ಚಿತ್ರೀಕರಣ ಮುಂದುವರಿಕೆಗೆ ಅಸ್ತು

ಬೆಂಗಳೂರು : ಕ್ಲೈಮ್ಯಾಕ್ಸ್ ಚಿತ್ರೀಕರಣ ಸಂದರ್ಭದಲ್ಲಿ ನಟರಾದ ಅನಿಲ್ ಮತ್ತು ಉದಯ್ ದುರ್ಮರಣದ ಬಳಿಕ ಮಾಸ್ತಿಗುಡಿ ಚಿತ್ರತಂಡಕ್ಕೆ ಹೇರಿದ್ದ ನಿರ್ಬಂಧವನ್ನು ಈಗ ತೆರವುಗೊಳಿಸಲಾಗಿದೆ. ಈ ಬಗ್ಗೆ ಇವತ್ತು ಫಿಲಂ ಚೇಂಬರ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಸ್ಥಗಿತಗೊಳಿಸಿದ್ದ ಚಿತ್ರೀಕರಣವನ್ನು ಮತ್ತೆ ಮುಂದುವರಿಸಿ ಚಿತ್ರ ಬಿಡುಗಡೆ ಮಾಡಬಹುದು ಎಂದು ಫಿಲಂ ಚೇಂಬರ್ ಸಮ್ಮತಿ ಸೂಚಿಸಿದೆ.
ಫಿಲಂ ಚೇಂಬರ್‍ನಲ್ಲಿ ಅಧ್ಯಕ್ಷ ಸಾ.ರಾ.ಗೋವಿಂದು, ರಾಕ್‍ಲೈನ್ ವೆಂಕಟೇಶ್, ದುನಿಯಾ ವಿಜಿ, ರವಿವರ್ಮ ಸೇರಿದಂತೆ ಹಲವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಮೊದಲ ಮಾತನಾಡಿದ ಸಾ.ರಾ.ಗೋವಿಂದು, ಮಾಸ್ತಿಗುಡಿ ಚಿತ್ರದ ಆದಾಯದಲ್ಲಿ ಮೃತರಾದ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದರು. ರಾಕ್‍ಲೈನ್ ವೆಂಕಟೇಶ್ ಕೂಡಾ ಇದೇ ಮಾತನ್ನು ಹೇಳಿದರು.

ಬಳಿಕ ಮಾತನಾಡಿದ ದುನಿಯಾ ವಿಜಿ, ದುರಂತ ನಡೆದಿದೆ. ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದರು. ಅಲ್ಲದೆ, ಚಿತ್ರೀಕರಣಕ್ಕೆ ಅವಕಾಶ ನೀಡಿದ ಫಿಲಂ ಛೇಂಬರ್‍ಗೂ ಧನ್ಯವಾದ ತಿಳಿಸಿದರು.

ಇನ್ನು, ಸಾಹಸ ನಿರ್ದೇಶಕ ರವಿವರ್ಮ ಮಾತನಾಡಿ, ಇಷ್ಟು ದಿನ ಸಣ್ಣ ತಪ್ಪು ಕೂಡಾ ಆಗಿರಲಿಲ್ಲ. ಈಗ ಈ ಘಟನೆ ಆಗಿ ಹೋಗಿದೆ. ತುಂಬಾ ನೋವಾಗುತ್ತಿದೆ ಎಂದು ಹೇಳಿದರು.

ನಾಗಶೇಖರ್ ನಿರ್ದೇಶನದ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ವೇಳೆ ನೀರಿಗೆ ಜಿಗಿಯುವ ಸಾಹಸದ ಸಂದರ್ಭದಲ್ಲಿ ಉದಯ್ ಮತ್ತು ಅನಿಲ್ ಎಂಬ ಇಬ್ಬರು ನಟರು ಕೊನೆಯುಸಿರೆಳೆದಿದ್ದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!