Sunday , July 22 2018
ಕೇಳ್ರಪ್ಪೋ ಕೇಳಿ
Home / Sandalwood / ಸಾಹಸ ಸಿಂಹನಿಲ್ಲದ 7 ವರ್ಷ : ಸಮಾಧಿ ಬಳಿ ಪುಣ್ಮಸ್ಮರಣೆ : ನೆನಪಿನ ಮುತ್ತಿನಹಾರ ಪುಸ್ತಕ ಲೋಕಾರ್ಪಣೆ

ಸಾಹಸ ಸಿಂಹನಿಲ್ಲದ 7 ವರ್ಷ : ಸಮಾಧಿ ಬಳಿ ಪುಣ್ಮಸ್ಮರಣೆ : ನೆನಪಿನ ಮುತ್ತಿನಹಾರ ಪುಸ್ತಕ ಲೋಕಾರ್ಪಣೆ

ಬೆಂಗಳೂರು : ಇಂದು ಸಾಹಸಸಿಂಹ ಡಾ. ವಿಷ್ಣು ವರ್ಧನ್ 7ನೇ ಪುಣ್ಯ ಸ್ಮರಣೆ. ಹೀಗಾಗಿ, ಇವತ್ತು ವಿಷ್ಣು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ಪೂಜೆ ಸಲ್ಲಿಸಿದರು. ಅಲ್ಲದೆ, ಪ್ರತಿವರ್ಷದಂತೆ ಈ ವರ್ಷ ಕೂಡಾ ಅನ್ನದಾನ, ನೇತ್ರದಾನ, ರಕ್ತದಾನ, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಸುಮಾರು 12,000 ಜನರಿಗೆ ಊಟದ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗಿತ್ತು. ನಿರ್ದೇಶಕ ಭಾರ್ಗವ, ನಟ ಜಗ್ಗೇಶ್, ರಮೇಶ್ ಭಟ್ ಸೇರಿದಂತೆ ಹಲವರು ವಿಷ್ಣು ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.

ಆದರೆ, ಸ್ಮಾರಕ ಗಲಾಟೆ ವಿಚಾರದಲ್ಲಿ ನೊಂದಿರುವ ವಿಷ್ಣುವರ್ಧನ್ ಕುಟುಂಬಸ್ಥರು ಮಾತ್ರ ಸಮಾಧಿ ಸ್ಥಳಕ್ಕೆ ಬರಲಿಲ್ಲ. ಬದಲಾಗಿ, ಜಯನಗರದ ತಮ್ಮ ನಿವಾಸದಲ್ಲಿಯೇ ಪೂಜೆ ಸಲ್ಲಿಸಿದರು. ಇತ್ತ, ಅಭಿಮಾನಿಗಳು ಮಾತ್ರ ಬೆಂಗಳೂರಿನಲ್ಲೇ ವಿಷ್ಣು ಸ್ಮಾರಕ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ನೆನಪಿನ ಮುತ್ತಿನ ಹಾರ : ಇನ್ನೊಂದು ಕಡೆ, ಬೆಂಗಳೂರಿನಲ್ಲಿ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಬರೆದಿರುವ `ನೆನಪಿನ ಮುತ್ತಿನ ಹಾರ: ನಟ ವಿಷ್ಣುವರ್ಧನ್ ಜೊತೆಗಿನ ನೆನಪುಗಳು’ ಪುಸ್ತಕವನ್ನು ಹಿರಿಯ ನಟ ಮತ್ತು ವಿಷ್ಣು ಗೆಳೆಯ ಅಂಬರೀಷ್ ಬಿಡುಗಡೆ ಮಾಡಿದರು. ಗಾಂಧಿ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ವಾರ್ತಾಇಲಾಖೆ ನಿರ್ದೇಶಕ ವಿಶುಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇನ್ನು, ಕುಚುಕು ಗೆಳೆಯನ ಗುಣಗಾನ ಮಾಡಿದ ಅಂಬಿ, ಗೆಳೆತನ ಕ್ಷಣಗಳನ್ನು ಮೆಲುಕು ಹಾಕಿಕೊಂಡರು. ವಿಷ್ಣು ತುಂಬಾ ಹ್ಯೂಮರಸ್ ಇರುವ ವ್ಯಕ್ತಿ. ಯಾರನ್ನೇ ಭೇಟಿ ಮಾಡಿದ ಐದು ನಿಮಿಷದಲ್ಲಿ ಅವರ ಹಾವ ಭಾವವನ್ನು ಆಕ್ಟ್ ಮಾಡಿ ತೋರಿಸ್ತಾ ಇದ್ದ ಎಂದು ಅಂಬಿ ಹಳೇ ನೆನಪುಗಳನ್ನು ಮತ್ತೆ ನೆನದರು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಜೋಗಿ, ಈ ಪುಸ್ತಕದಲ್ಲಿ ನಾವು ನೋಡಿರುವ ಮತ್ತು ನೋಡಿದರ ವಿಷ್ಣುವರ್ಧನ್ ಅವರನ್ನು ಕಾಣುತ್ತೇವೆ ಎಂದು ಹೇಳಿದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!