Tuesday , August 14 2018
ಕೇಳ್ರಪ್ಪೋ ಕೇಳಿ
Home / Sudina Special / ಸೂರ್ಯ ನಮಸ್ಕಾರ ಮಾಡಿದ್ದಕ್ಕೆ ಟೀಕೆ : ಟೀಕಾಕಾರರಿಗೆ ಮೊಹಮ್ಮದ್ ಕೈಫ್ ಉತ್ತರ ಏನು ಗೊತ್ತಾ…?

ಸೂರ್ಯ ನಮಸ್ಕಾರ ಮಾಡಿದ್ದಕ್ಕೆ ಟೀಕೆ : ಟೀಕಾಕಾರರಿಗೆ ಮೊಹಮ್ಮದ್ ಕೈಫ್ ಉತ್ತರ ಏನು ಗೊತ್ತಾ…?

ನವದೆಹಲಿ : ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಜೊತೆ ಫೋಟೋ ಹಾಕಿದ್ದಕ್ಕೆ ಮೂಲಭೂತವಾದಿಗಳಿಂದ ತೀವ್ರ ಟೀಕೆ ಎದುರಿಸಿದ್ದರು. ಶಮಿ ಪತ್ನಿ ಉಡುಗೆಯನ್ನು ಟೀಕೆ ಮಾಡಿ ಟ್ವೀಟ್ ಮಾಡಿದ್ದರು ಇವರು. ಈ ಆಕ್ಷೇಪಕ್ಕೆ ಶಮಿ ದಿಟ್ಟ ಉತ್ತರ ಕೊಟ್ಟಿದ್ದರು. ಈ ಘಟನೆ ಮಾಸುವ ಮೊದಲೇ ಮತ್ತೋರ್ವ ಕ್ರಿಕೆಟಿಗ ಮಹಮ್ಮದ್ ಕೈಫ್ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಹಮ್ಮದ್ ಕೈಫ್ ಟೀಕೆಗೆ ಗುರಿಯಾಗಲು ಕಾರಣ ಅವರು ಸೂರ್ಯ ನಮಸ್ಕಾರ ಮಾಡುವ ಫೋಟೋವನ್ನು ಟ್ವಿಟರ್‍ಗೆ ಅಪ್‍ಲೋಡ್ ಮಾಡಿದ್ದು. ಸೂರ್ಯ ನಮಸ್ಕಾರದ ವಿವಿಧ ಭಂಗಿಯನ್ನು ಕೈಫ್ ಅಪ್‍ಲೋಡ್ ಮಾಡಿದ್ದರು. `ಸೂರ್ಯ ನಮಸ್ಕಾರ ಮಾಡುವುದರಿಂದ ದೇಹಕ್ಕೆ ಪೂರ್ಣಪ್ರಮಾಣದ ವ್ಯಾಯಾಮ ಸಿಗುತ್ತದೆ. ಯಾವುದೇ ಉಪಕರಣಗಳ ಸಹಾಯವಿಲ್ಲದೆಯೇ ಸೂರ್ಯ ನಮಸ್ಕಾರ ಮೂಲಕ ದೇಹ ದಂಡಿಸಬಹುದು ಎಂದು ಕೈಫ್ ಟ್ವಿಟರ್‍ನಲ್ಲಿ ಹಾಕಿಕೊಂಡಿದ್ದಾರೆ.
ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧಕ್ಕೆ ಕೈಫ್ ಕೂಡಾ ದಿಟ್ಟ ಉತ್ತರ ಕೊಟ್ಟಿದ್ದಾರೆ. `ಅಲ್ಲಾ ನನ್ನ ಹೃದಯಲ್ಲಿದ್ದಾನೆ. ಸೂರ್ಯ ನಮಸ್ಕಾರವನ್ನು ಎಲ್ಲಾ ಧರ್ಮದವರು ಮಾಡಿ ಅದರ ಲಾಭ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಮೊಹಮ್ಮದ್ ಶಮಿ ಫೋಟೋ ಕೂಡಾ ಹೀಗೆಯೇ ವಿವಾದಕ್ಕೆ ಕಾರಣವಾದ ಸಂದರ್ಭದಲ್ಲೂ ಕೈಫ್ ಶಮಿ ಪರ ನಿಂತಿದ್ದರು.

About sudina

Check Also

ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಪಿಲಿಫೇನ್ಸ್ : ಶ್ವಾನ ನಿಯತ್ತಿಗೆ ಮತ್ತೊಂದು ಹೆಸರು… ಅನ್ನ ಇಟ್ಟ ಮನೆಗೆ ಯಾವತ್ತೂ ದ್ರೋಹ ಬಗೆಯುವ ಪ್ರಾಣಿ ನಾಯಿಯಲ್ಲ… ಇದೂ …

Leave a Reply

Your email address will not be published. Required fields are marked *

error: Content is protected !!