Thursday , November 15 2018
ಕೇಳ್ರಪ್ಪೋ ಕೇಳಿ
Home / News NOW / ಮಂಗಳೂರು – ಶಾರ್ಜಾ ವಿಮಾನ ಕೊನೇಕ್ಷಣಗಳಲ್ಲಿ ರದ್ದು : ಪ್ರಯಾಣಿಕರ ಆಕ್ರೋಶ

ಮಂಗಳೂರು – ಶಾರ್ಜಾ ವಿಮಾನ ಕೊನೇಕ್ಷಣಗಳಲ್ಲಿ ರದ್ದು : ಪ್ರಯಾಣಿಕರ ಆಕ್ರೋಶ

ಮಂಗಳೂರು : ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವತ್ತು ದುಬೈಗೆ ಹೋಗುವ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದರು. ಮಂಗಳೂರಿನಿಂದ ಶಾರ್ಜಾಗೆ ಹೋಗುವ ವಿಮಾನ ಮೊದಲು ತಡವಾಯ್ತು. ಕೊನೆಗೇ ವಿಮಾನ ಪ್ರಯಾಣವೇ ರದ್ದಾಗಿತ್ತು. ಇದರಿಂದ ಅಷ್ಟು ಹೊತ್ತು ಕಾದು ಕಾದು ಸುಸ್ತಾದ ಜನ ಆಕ್ರೋಶ ವ್ಯಕ್ತಪಡಿಸಿದರು.

ಶಾರ್ಜಾಗೆ ಬೆಳಗ್ಗೆ 9 ಗಂಟೆಗೆ ಹೊರಡುವ ಜೆಟ್ ಏರ್‍ವೇಸ್‍ನಲ್ಲಿ ಪ್ರಯಾಣಿಸಲು 168 ಪ್ರಯಾಣಿಕರು ಬಂದಿದ್ದರು. ಬಳಿಕ ವಿಮಾನ ಪ್ರಯಾಣ 10.30ಕ್ಕೆ ಎಂದು ನಿಗದಿ ಆಯ್ತು. ಬಳಿಕ ಮಧ್ಯರಾತ್ರಿ 1.30 ಎಂದಾಯ್ತು. ಈ ವೇಳೆ, ಬೆಳಗ್ಗೆ 11 ಗಂಟೆಯಷ್ಟೊತ್ತಿಗೆ ವಿಮಾನ ಪ್ರಯಾಣವನ್ನು ಇವತ್ತು ರದ್ದು ಮಾಡಲಾಗಿದೆ ಎಂಬ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಲಾಯ್ತು. ಆದರೆ, ವಿಮಾನ ಸಂಚಾರ ತಡವಾಗಿದ್ದು ಯಾಕೆ ಮತ್ತು ರದ್ದು ಮಾಡಿದ್ದು ಯಾಕೆ ಎಂಬ ಬಗ್ಗೆ ಸಮರ್ಪಕ ಕಾರಣವನ್ನು ಪ್ರಯಾಣಿಕರಿಗೆ ನೀಡಿರಲಿಲ್ಲ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಬೆಳಗ್ಗೆ ಕೆಲ ಪ್ರಯಾಣಿಕರು ಉಪಹಾರವನ್ನೂ ಸೇವಿಸದೆ ಬಂದಿದ್ದರು. ಆದರೆ, ಇಲ್ಲಿ ವಿಮಾನ ಕೂಡಾ ತಡವಾಗಿತ್ತು. ಹೀಗಾಗಿ, ಉಪಹಾರ ನೀಡುವಂತೆ ಕೆಲ ಪ್ರಯಾಣಿಕರು ಆಗ್ರಹ ಮಾಡಿದರು. ಈ ವೇಳೆ, ಸಣ್ಣ ಮಟ್ಟಿನ ಗೊಂದಲದ ವಾತಾವರಣವೂ ನಿರ್ಮಾಣವಾಗಿತ್ತು.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!