Tuesday , May 22 2018
Home / News NOW / ಮತ್ತೊಮ್ಮೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ಮೊಹಮ್ಮದ್ ಶಮಿ…!

ಮತ್ತೊಮ್ಮೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದ ಮೊಹಮ್ಮದ್ ಶಮಿ…!

ಮುಂಬೈ : ಕ್ರಿಕೆಟಿಗ ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿಯೊಂದಿಗಿನ ಫೋಟೋ ಹಾಕಿದ್ದಕ್ಕೆ ಮೂಲಭೂತವಾದಿಗಳು ಸಿಟ್ಟಾಗಿದ್ದರು. ಈ ಟೀಕೆಗೆ ಕಿವಿಗೊಡದೆ ಶಮಿ ಧೈರ್ಯ ಪ್ರದರ್ಶಿಸಿದ್ದರು. ಈ ವೇಳೆ, ಹಲವರು ಶಮಿ ಬೆಂಬಲಕ್ಕೆ ನಿಂತಿದ್ದರು. ಇದೀಗ ಶಮಿ ಮತ್ತೊಮ್ಮೆ ಇದೇ ರೀತಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಫೇಸ್‍ಬುಕ್‍ನಲ್ಲಿ ಪತ್ನಿಯ ಫೋಟೋದೊಂದಿಗೆ ಹೊಸವರ್ಷದ ಶುಭಾಶಯವನ್ನು ಶಮಿ ಹಾಕಿದ್ದಾರೆ. ಈ ಶುಭಾಶಯ ಸಂದೇಶಕ್ಕೆ ಹಲವರು ಈ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಇದರಲ್ಲಿ ಕೆಲವರು ತಮ್ಮ ಟೀಕೆಯನ್ನೂ ಮುಂದುವರಿಸಿದ್ದಾರೆ. ಕೆಲವರು ಶಮಿ ಪತ್ನಿಯ ಧಿರಿಸಿನ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಮೂಲಭೂತವಾದಿಗಳು ಟೀಕೆ ಮಾಡಿದರೂ ಶಮಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!