Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಹರಿಯಾಣದಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೆ ಶೂ ದಾಳಿ

ಹರಿಯಾಣದಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೆ ಶೂ ದಾಳಿ

ರೋಹಟಕ್ : ನೋಟ್ ಬ್ಯಾನ್ ಖಂಡಿಸಿ ನಡೆಯುತ್ತಿದ್ದ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆ ಶೂ ದಾಳಿ ನಡೆದಿದೆ. ವೇದಿಕೆ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಶೂ ಎಸೆದಿರುವುದಾಗಿ ಇಂಡೋ ಏಷಿಯನ್ ನ್ಯೂ ಸವೀಸ್ ಸಂಸ್ಥೆ ವರದಿ ಮಾಡಿವೆ. ಆದರೆ, ಎಸೆದ ಶೂ ವೇದಿಕೆಯ ಬದಿಗೆ ತಾಗಿದ್ದು, ಕೇಜ್ರಿವಾಲ್ ಹತ್ತಿರಕ್ಕೇ ಹೋಗಿ ಬಿದ್ದಿತ್ತು ಎಂದು ಗೊತ್ತಾಗಿದೆ. ಹರಿಯಾಣದ ರೋಹಟಕ್‍ನಲ್ಲಿ ನಡೆಯುತ್ತಿದ್ದ ಜಾಥಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಈ ಘಟನೆ ಬಳಿಕ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಮೋದಿ ಬೆಂಬಲಿಗರೇ ಈ ಕೃತ್ಯವೆಸಗಿದ್ದಾರೆ. ನಾವು ಕೂಡಾ ಇದೇ ರೀತಿ ಮಾಡಬಹುದು. ಆದರೆ, ನಾವು ನಂಬಿರುವ ತತ್ವ ಸಿದ್ಧಾಂತಗಳು ಇಂತಹ ಕೃತ್ಯ ಮಾಡಲು ನಮಗೆ ಬಿಡುತ್ತಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೇಜ್ರಿವಾಲ್ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಕಡೆಗಳಲ್ಲಿ ಶೂ ಮತ್ತು ಶಾಹಿಯಿಂದ ಕೇಜ್ರಿವಾಲ್ ಮೇಲೆ ಕೆಲವರು ದಾಳಿ ಮಾಡಿದ್ದರು.

video courtesy : BBC WORLD

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!