Wednesday , January 24 2018
Home / Film News / Bollywood / `ಬಿಗ್‍ಬಾಸ್’ನಲ್ಲಿ ಮತ್ತೆ ಒಂದಾಗಲಿದ್ದಾರೆ ಶಾರೂಖ್ ಸಲ್ಮಾನ್
Buy Bitcoin at CEX.IO

`ಬಿಗ್‍ಬಾಸ್’ನಲ್ಲಿ ಮತ್ತೆ ಒಂದಾಗಲಿದ್ದಾರೆ ಶಾರೂಖ್ ಸಲ್ಮಾನ್

ಮುಂಬೈ : ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಮತ್ತೆ ಒಂದಾಗುತ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಬಿಗ್‍ಬಾಸ್‍ನಲ್ಲಿ ಖಾನ್‍ಗಳಿಬ್ಬರು ಜೊತೆಯಾಗುತ್ತಿದ್ದಾರೆ. ಶಾರೂಕ್ ತಮ್ಮ ರಾಯಿಸ್ ಚಿತ್ರದ ಪ್ರಮೋಷನ್‍ಗಾಗಿ ಬಿಗ್‍ಬಾಸ್ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಿಗ್‍ಬಾಸ್ 9ನೇ ಸೀಸನ್‍ನಲ್ಲಿ ಶಾರೂಖ್ ಮತ್ತು ಸಲ್ಮಾನ್ ಜೊತೆಯಾಗಿ ಕಾಣಿಸಿಕೊಂಡು ಕಿರುತೆರೆ ಇತಿಹಾಸದಲ್ಲಿ ದಾಖಲೆ ಬರೆದಿತ್ತು. ಇದೀಗ ಇಬ್ಬರು ದಿಗ್ಗಜರನ್ನು ನೋಡುವ ಅವಕಾಶ ಮತ್ತೆ ಅಭಿಮಾನಿಗಳಿಗೆ ಬಂದಿದೆ.  ಶಾರೂಖ್ ಎರಡು ಎಪಿಸೋಡ್‍ಗಳನ್ನು ಶೂಟ್ ಮಾಡಲಿದ್ದಾರೆ. ಇದು ಫಿನಾಲೆಗಿಂತ ಮುಂಚಿನ ವಾರದಲ್ಲಿ ಪ್ರಸಾರವಾಗಲಿದೆ. ಕಳೆದ ಬಾರಿ `ದಿಲ್‍ವಾಲೆ’ ಚಿತ್ರದ ಪ್ರಮೋಷನ್‍ಗಾಗಿ ಶಾರೂಖ್ ಕಾಜೋಲ್ ಜೊತೆ ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದರು.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!