Wednesday , January 24 2018
Home / Film News / Bollywood / ದೇವಗನ್ ವಿರುದ್ಧದ ಸೇಡು ತೀರಿಸಿದರಾ ಕರಣ್ ಜೋಹರ್…?
Buy Bitcoin at CEX.IO

ದೇವಗನ್ ವಿರುದ್ಧದ ಸೇಡು ತೀರಿಸಿದರಾ ಕರಣ್ ಜೋಹರ್…?

ಮುಂಬೈ : ಬಾಲಿವುಡ್ ನಟರಾದ ಸಲ್ಮಾನ್ ಮತ್ತು ಅಕ್ಷಯ್ ಕುಮಾರ್ ಒಂದೇ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಮತ್ತು ಸಲ್ಮಾನ್ ಖಾನ್ ಈ ದೊಡ್ಡ ಪ್ರಾಜೆಕ್ಟ್‍ಗೆ ಕೈ ಜೋಡಿಸಿದ್ದು, ಅಕ್ಷಯ್ ಕುಮಾರ್ ಈ ಚಿತ್ರದ ನಾಯಕರಾಗಲಿದ್ದಾರೆ. ಬಾಲಿವುಡ್ ಇತಿಹಾಸದಲ್ಲೂ ಇದೊಂದಿಗೆ ಹೊಸ ಪ್ರಯತ್ನವಾಗಿದೆ. ಆದರೆ, ಮೂರು ಜನ ಕೂಡಾ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಲಭ್ಯ ಮಾಹಿತಿ ಪ್ರಕಾರ 1897ರ ಸೆಪ್ಟೆಂಬರ್ 12ರಂದು ನಡೆದಿದ್ದ ಯುದ್ಧದಲ್ಲಿ ಹೋರಾಡಿದ್ದ ಹವಾಲ್ದಾರ್ ಇಶಾರ್ ಸಿಂಗ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಅದೇನೆಂದರೆ ಇಶಾರ್ ಸಿಂಗ್ ಅವರ ಪಾತ್ರವನ್ನು ತೆರೆಗೆ ತರಲು ಬಾಲಿವುಡ್‍ನ ಮತ್ತೋರ್ವ ನಟ ಅಜಯ್ ದೇವಗನ್ ಕೂಡಾ ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿಯೇ ಕಳೆದ ವರ್ಷ `ಸನ್ ಆಫ್ ಸರ್ದಾರ್’ ಚಿತ್ರವನ್ನು ದೇವಗನ್ ಘೋಷಿಸಿದ್ದರು. ಶಿವಾಯಿ ಚಿತ್ರದ ಬಳಿಕ ದೇವಗನ್ ಈ ಪ್ರಾಜೆಕ್ಟ್‍ಗೆ ಕೈ ಹಾಕಲಿದ್ದಾರೆ. ಆದರೆ, ಶಿವಾಯಿ ಬಾಕ್ಸ್ ಆಫೀಸ್‍ನಲ್ಲಿ ಅಷ್ಟೆನೋ ಒಳ್ಳೆಯ ಸಾಧನೆ ಮಾಡಿರಲಿಲ್ಲ. ಹೀಗಾಗಿ, ಐತಿಹಾಸಿಕ ಚಿತ್ರ ಮಾಡುವ ಸಂದರ್ಭದಲ್ಲಿ ಇನ್ನಷ್ಟು ಬಜೆಟ್ ಬೇಕಾಗಿದ್ದರಿಂದ ಅಜಯ್ ಈ ಪ್ರಾಜೆಕ್ಟ್ ಸ್ವಲ್ಪ ತಡವಾಗಿದೆಯಾದರೂ ಈ ಚಿತ್ರವನ್ನು ಪೂರ್ಣಗೊಳಿಸುವ ದೊಡ್ಡ ಆಸೆಯನ್ನು ಇಟ್ಟುಕೊಂಡಿದ್ದಾರೆ.

ಬಾಲಿವುಡ್‍ನ ಸುದ್ದಿಯನ್ನು ಸದಾ ಬಲ್ಲವರಿಗೆ ಅಜಯ್ ದೇವಗನ್ ಮತ್ತು ಕರಣ್ ಜೋಹಾರ್ ನಡುವಣ ಮುಸುಕಿನ ಗುದ್ದಾಟದ ಅರಿವಿದೆ. ಇತ್ತೀಚಿನ ದಿನಗಳಂತೂ ಇವರಿಬ್ಬರ ನಡುವೆ ಸದಾ ಜಗಳವೇ ಆಗ್ತಿರುತ್ತದೆ. ಬಾಲಿವುಡ್ ಪಂಡಿತರ ಪ್ರಕಾರ ಕರಣ್ ಈ ಜಗಳವನ್ನು ಇನ್ನೊಂದು ಹಂತಕ್ಕೆ ಕೊಂಡು ಹೋಗಿದ್ದಾರೆ. ಹೀಗಾಗಿಯೇ, ಅಜಯ್ ಘೋಷಿಸಿದ ಚಿತ್ರದಂತೆಯೇ ತಾನೂ ಒಂದು ಚಿತ್ರ ಘೋಷಿಸಿದ್ದಾರೆ. ಜೊತೆಗೆ ಸಲ್ಮಾನ್ ಬೆಂಬಲ ಸಿಕ್ಕಿರುವುದು ಕರಣ್‍ಗೆ ಮತ್ತೊಂದು ಜಯ ಸಿಕ್ಕಂತಾಗಿದೆ. ಇದರಿಂದ ಇನ್ನು ಅಜಯ್ ಪ್ಲಾನ್ ಏನಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!