Friday , April 20 2018
Home / Sandalwood / ಶೀಘ್ರ ತೆರೆಗೆ ರವಿಶಂಕರ್ ಪುತ್ರ

ಶೀಘ್ರ ತೆರೆಗೆ ರವಿಶಂಕರ್ ಪುತ್ರ

ಬೆಂಗಳೂರು : ಸ್ಯಾಂಡಲ್‍ವುಡ್‍ನ ಖಡಕ್ ವಿಲನ್ ರವಿಶಂಕರ್ ಪುತ್ರ ಚಿತ್ರರಂಗಕ್ಕೆ ಬರಲು ಸಿದ್ಧರಾಗಿದ್ದಾರೆ. ರವಿಶಂಕರ್ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ನಡುವೆಯೂ ರವಿಶಂಕರ್ ಚಿತ್ರವೊಂದಕ್ಕೆ ಸ್ಕ್ರಿಪ್ಟ್ ಸಿದ್ಧ ಮಾಡುತ್ತಿದ್ದಾರೆ. ಈ ಚಿತ್ರ ಯಾರಿಗೆ ಗೊತ್ತಾ? ರವಿ ಪುತ್ರ ಅದ್ವಯ್ ಶಂಕರ್‍ಗಾಗಿ…

ಸದ್ಯ ಇತಿಹಾಸ ವಿಷಯದಲ್ಲಿ ಬಿಎ ಪದವಿ ಮುಗಿಸಿರುವ ಅದ್ವಯ್ ನಟನಾ ಕ್ಷೇತ್ರಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ಹಲವು ವಿಧದ ತರಬೇತಿಯನ್ನೂ ಅದ್ವಯ್ ಪಡೆದಿದ್ದಾರೆ. ಸದ್ಯ ಅದ್ವಯ್ ಅವರು ನ್ಯೂಯಾರ್ಕ್‍ನ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಆಂಡ್ ಫಿಲಂ ಇನ್ಸಿಟ್ಯೂಷನ್‍ನಲ್ಲಿ ಒಂದು ವರ್ಷದ ತರಬೇತಿಯನ್ನು ಪಡೆಯುತ್ತಿದ್ದಾರೆ.

ರವಿಶಂಕರ್‍ಗೆ ಬದುಕು ನೀಡಿದ ಸ್ಯಾಂಡಲ್‍ವುಡ್‍ನಿಂದಲೇ ತನ್ನ ಮಗನನ್ನೂ ಪರಿಚಯಿಸಲು ನಿರ್ಧರಿಸಿರುವ ರವಿಶಂಕರ್ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!