Monday , June 25 2018
ಕೇಳ್ರಪ್ಪೋ ಕೇಳಿ
Home / Film News / Bollywood / ಮೃತ ಕಲಾವಿದನ ಕುಟುಂಬಕ್ಕೆ ಮತ್ತೆ ಧನಸಹಾಯ ಮಾಡಿದ ಬನ್ಸಾಲಿ

ಮೃತ ಕಲಾವಿದನ ಕುಟುಂಬಕ್ಕೆ ಮತ್ತೆ ಧನಸಹಾಯ ಮಾಡಿದ ಬನ್ಸಾಲಿ

ಮುಂಬೈ : ಪದ್ಮಾವತಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸೆಟ್‍ನಿಂದ ಬಿದ್ದು ಸಾವನ್ನಪ್ಪಿದ್ದ ವರ್ಣಚಿತ್ರಕಾರ ಮುಕೇಶ್ ದಾಕಿಯಾ ಕುಟುಂಬಕ್ಕೆ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತೆ 2 ಲಕ್ಷಕ್ಕೂ ಅಧಿಕ ಪರಿಹಾರ ನೀಡಿದ್ದಾರೆ. ಬನ್ಸಾಲಿ ಒಟ್ಟು 23 ಲಕ್ಷದಷ್ಟು ಹಣಕಾಸಿನ ನೆರವನ್ನು ನೀಡಿದ್ದಾರೆ.

ಪದ್ಮಾವತಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ವರ್ಣಚಿತ್ರಕಾರ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು. ಚಿತ್ರಕ್ಕಾಗಿ ಸಮಾಧಿ ಕಟ್ಟುವ ಕೆಲಸದಲ್ಲಿ ತೊಡಗಿದ್ದ ವರ್ಣಚಿತ್ರಕಾರ ಮುಕೇಶ್ ದಾಕಿಯಾ 5 ಅಡಿ ಎತ್ತರದಿಂದ ಬಿದ್ದ ಪರಿಣಾಮ ಈ ದುರಂತ ಸಂಭವಿಸಿತ್ತು. ಮೇಲಿಂದ ಬಿದ್ದ ತಕ್ಷಣ ಮುಕೇಶ್ ಅವರ ಬೆನ್ನು ಮತ್ತು ತಲೆಗೆ ಭಾರೀ ಏಟು ಬಿದ್ದಿತು. ಕೂಡಲೇ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು.

ಘಟನೆ ನಡೆದಂದೇ ಬನ್ಸಾಲಿ 20,80,000 ರೂಪಾಯಿ ಚೆಕ್ ನೀಡಿದ್ದರು. ಇದೀಗ ಮತ್ತೆ ಮುಕೇಶ್ ಅವರ ಕೆಲಸದ ಸಂಬಳವಾಗಿ 2,20,000 ರೂಪಾಯಿಯನ್ನು ಅವರ ಕುಟುಂಬಕ್ಕೆ ನೀಡಿದ್ದಾರೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!