Thursday , November 15 2018
ಕೇಳ್ರಪ್ಪೋ ಕೇಳಿ
Home / Film News / Kollywood / `ಯು/ಎ’ ಸರ್ಟಿಫಿಕೇಟ್‍ನಿಂದ `ಯು’ ಸರ್ಟಿಫಿಕೇಟ್ ಪಡೆದ ಸಿಂಗಂ 3

`ಯು/ಎ’ ಸರ್ಟಿಫಿಕೇಟ್‍ನಿಂದ `ಯು’ ಸರ್ಟಿಫಿಕೇಟ್ ಪಡೆದ ಸಿಂಗಂ 3

ಚೆನ್ನೈ : ತಮಿಳುನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿಂಗಂ 3 ಚಿತ್ರತಂಡಕ್ಕೆ ಖುಷಿಯ ಸಂಗತಿ. ಈ ಹಿಂದೆ ಯು/ಎ ಸರ್ಟಿಫಿಕೇಟ್ ಪಡೆದಿದ್ದ ಈ ಚಿತ್ರ ಈಗ ಯು ಸರ್ಟಿಫಿಕೇಟ್ ಪಡೆದಿದೆ. ಸೆನ್ಸಾರ್ ಮಂಡಳಿಯ ಮರುಪರಿಶೀಲನಾ ಸಮಿತಿ ಈ ಪ್ರಮಾಣಪತ್ರ ನೀಡಿದೆ. ಈ ಹಿಂದೆ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಚಿತ್ರತಂಡ ಮರುಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಿತ್ತು.

ಜನವರಿ 26ರಂದು ಸಿಂಗಂ 3 ಚಿತ್ರ ರಿಲೀಸ್ ಆಗಲಿದೆ. ಮರುಪರಿಶೀಲನಾ ಸಮಿತಿಯಲ್ಲೂ ತಮಗೆ ಯು ಸರ್ಟಿಫಿಕೇಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಮುಂದೂಡಿದ್ದರು. ಯು ಸರ್ಟಿಫಿಕೇಟ್ ಇದ್ದರೆ ಎಲ್ಲಾ ವಯೋಮಿತಿಯವರೂ ನೋಡುವಂತಿರುತ್ತದೆ ಮತ್ತು ತಮಿಳುನಾಡಿನಲ್ಲಿ ತೆರಿಗೆ ವಿನಾಯತಿಯನ್ನೂ ಪಡೆಯಲು ಅನುಕೂಲಕರವಾಗಿದೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!