Wednesday , November 21 2018
ಕೇಳ್ರಪ್ಪೋ ಕೇಳಿ
Home / News NOW / ಹೆಂಡತಿಯನ್ನು ಕೊಂದು ಫ್ರಿಡ್ಜ್‍ನಲ್ಲಿಟ್ಟಿದ್ದ ಭಾರತೀಯನಿಗೆ ಜೀವಾವಧಿ ಶಿಕ್ಷೆ

ಹೆಂಡತಿಯನ್ನು ಕೊಂದು ಫ್ರಿಡ್ಜ್‍ನಲ್ಲಿಟ್ಟಿದ್ದ ಭಾರತೀಯನಿಗೆ ಜೀವಾವಧಿ ಶಿಕ್ಷೆ

ಮುಂಬೈ : ಫ್ರೆಂಚ್ ಮಹಿಳೆಯನ್ನು ಮದುವೆಯಾಗಿದ್ದ ಭಾರತೀಯ ಮೂಲದ ವ್ಯಕ್ತಿ ಹೆಂಡತಿಯನ್ನು ಕೊಂದು ಕೃತ್ಯ ಮರೆಮಾಚಲು ಶವವನ್ನು ಫ್ರಿಡ್ಜ್‍ನಲ್ಲಿಟ್ಟಿದ್ದ. ಮೂರು ವರ್ಷದ ಹಿಂದೆ ನಡೆದಿದ್ದ ಈ ಪ್ರಕರಣದ ತೀರ್ಪು ಈಗ ಹೊರಬಿದ್ದಿದ್ದು, ಅಪರಾಧಿ ಗಂಡನಿಗೆ ಥಾಣೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

38 ವರ್ಷದ ಗಿರೀಶ್ ಪೋಟ್ ಶಿಕ್ಷೆಗೊಳಗಾದ ವ್ಯಕ್ತಿ. ಗಿರೀಶ್ 33 ವರ್ಷದ ಮಧುವಂತಿ ಪಾಠಕ್‍ರನ್ನು ವರಿಸಿದ್ದ. ಮುಂಬೈಯಲ್ಲಿ ಈ ದಂಪತಿ ನೆಲೆಸಿದ್ದರು. ಆದರೆ, ಫ್ರಾನ್ಸ್‍ನಲ್ಲೇ ಹುಟ್ಟಿ ಬೆಳೆದಿದ್ದ ಮಧುವಂತಿ ಭಾರತ ಬಿಟ್ಟು ಫ್ರಾನ್ಸ್‍ನಲ್ಲೇ ನೆಲೆಸಲು ನಿರ್ಧರಿಸಿದ್ದರು. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಸದಾ ಜಗಳ ಆಗುತ್ತಿತ್ತು. ಹೀಗಾಗಿ, ಭಾರತವನ್ನು ಬಿಟ್ಟು ಹಣದೊಂದಿಗೆ ಫ್ರಾನ್ಸ್‍ಗೆ ಮರಳುತ್ತೇನೆ ಎಂದು ಹೇಳುತ್ತಿದ್ದ ಹೆಂಡತಿಯನ್ನು ಕೊಲ್ಲುವುದಕ್ಕೆ ಈತ ನಿರ್ಧರಿಸಿದ್ದ. ಇದಕ್ಕಾಗಿ ಪಕ್ಕದ ಶಾಪಿಂಗ್ ಮಾಲ್‍ನಲ್ಲಿ ಹೊಸ ಚೂರಿಯನ್ನೂ ತಂದು ಇರಿಸಿದ್ದ. ಒಂದು ದಿನ ಅಂದರೆ 2013ರ ಡಿಸೆಂಬರ್ 3ರಂದು ಈ ಜಗಳ ತಾರಕಕ್ಕೇರಿ ಗಿರೀಶ್ ಹೆಂಡತಿಯನ್ನು ಹತ್ಯೆ ಮಾಡಿದ್ದ. ಬಳಿಕ ಮನೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಹಾಗೂ ಪಕ್ಕದ ಬಿಲ್ಡಿಂಗ್‍ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಬಾರದು ಮತ್ತು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಮೃತದೇಹವನ್ನು ಫ್ರಿಡ್ಜ್‍ನಲ್ಲಿ ಇಟ್ಟಿದ್ದ.

ಆದರೆ, ಇಷ್ಟು ವ್ಯವಸ್ಥಿತವಾಗಿದ್ದ ಹತ್ಯೆ ಮಾಡಿದ್ದ ಗಿರೀಶ್ ಮೃತ ಮಹಿಳೆಯ ಸಂಬಂಧಿಕರೊಂದಿಗೆ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದ. ಇದರಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದಾಗ ಈ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು.

ಗಿರೀಶ್ ಮತ್ತು ಮಧುವಂತಿ 2011ರ ಜೂನ್‍ನಲ್ಲಿ ಮದುವೆ ಆಗಿದ್ದರು. ಒಂದು ಮಗು ಕೂಡಾ ಈ ದಂಪತಿಗೆ ಇದೆ. ಈ ಘಟನೆ ನಡೆಯುವಾಗ ಈ ಮಗುವಿಗೆ ಎರಡು ವರ್ಷ. ಮಧುವಂತಿಯ ತಾಯಿ ಫ್ರಾನ್ಸ್‍ನ ಸಂಗೀತಗಾರ್ತಿ ಹಾಗೂ ತಂದೆ ಭಾರತೀಯ ಮೂಲದವರಾಗಿದ್ದಾರೆ.

ಪ್ರಾಸಿಕ್ಯೂಷನ್‍ನವರು ಗಿರೀಶ್‍ಗೆ ಮರಣದಂಡನೆ ವಿಧಿಸಬೇಕು ಎಂದು ವಾದ ಮಾಡಿದ್ದರು. ಆದರೆ, ನ್ಯಾಯಾಧೀಶರು ಸಾಯುವ ವರೆಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!