Monday , May 21 2018
Home / Sudina Special / ತನ್ನ ಫೋನ್ ನಂಬರನ್ನು `ಸೂಪರ್ ಐಟಂ’ ಎಂದು ಸೇವ್ ಮಾಡಿ ಕಾಟ ಕೊಡುತ್ತಿದ್ದಾತನಿಗೆ ಬುದ್ಧಿ ಕಲಿಸಿದ ವನಿತೆ

ತನ್ನ ಫೋನ್ ನಂಬರನ್ನು `ಸೂಪರ್ ಐಟಂ’ ಎಂದು ಸೇವ್ ಮಾಡಿ ಕಾಟ ಕೊಡುತ್ತಿದ್ದಾತನಿಗೆ ಬುದ್ಧಿ ಕಲಿಸಿದ ವನಿತೆ

ತಿರುವನಂತಪುರಂ : ಇದು ಸಾಹಸಿ ಮಹಿಳೆಯ ಕತೆ. `ವೇಶ್ಯೆ’ ಎಂದು ಅಂದುಕೊಂಡು ತನಗೆ ಕಾಟ ಕೊಡುತ್ತಿದ್ದ `ಪ್ರತಿಷ್ಠಿತ’ ವ್ಯಕ್ತಿಗೆ ಈ ಮಹಿಳೆ ಬುದ್ಧಿ ಕಳುಹಿಸಿದ್ದಾರೆ.

ಶ್ರೀಲಕ್ಷ್ಮಿ ಸತೀಶ್… ಈ ಕತೆಯ ನಾಯಕಿ. ಇವರಿಗೆ ನಿರಂತರ ಫೋನ್ ಕಾಲ್ ಬರುತ್ತಿತ್ತು. `ನಿನ್ನ ರೇಟ್ ಏನು…?’. `ನಾನು ಯಾವಾಗ ಬಂದು ಭೇಟಿ ಆಗಲಿ…?’, `ನಾನು ರೂಮ್ ಬುಕ್ ಮಾಡಲಾ…? ಹೀಗೆ ಅಶ್ಲೀಲ ಮಾತನ್ನೇ ಕರೆ ಮಾಡಿದವರು ಹೇಳುತ್ತಿದ್ದರು. ಈ ಕರೆ ಬಂದ ತಕ್ಷಣ ಶ್ರೀಲಕ್ಷ್ಮಿ ಫೋನ್ ಕಟ್ ಮಾಡುತ್ತಿದ್ದರು. ಆದರೂ ಫೋನ್ ಬರುವುದು ಮಾತ್ರ ತಪ್ಪಿರಲಿಲ್ಲ. ಯಾರ್ಯಾರೋ ಇವರಿಗೆ ಫೋನ್ ಮಾಡಿ ಕಾಟ ಕೊಡುತ್ತಿದ್ದರು. ಎಲ್ಲರೂ `ನಿನ್ನ ರೇಟ್ ಏನು?’ಎಂಬರ್ಥದಲ್ಲೇ ಮಾತನಾಡುತ್ತಿದ್ದರು.

ಕೇರಳದಲ್ಲಿ ತನ್ನದೇ ಸಂಸ್ಥೆ ನಡೆಸುತ್ತಿರುವ ಶ್ರೀಲಕ್ಷ್ಮಿ, ಈ ಕಾಟವನ್ನು ಅನುಭವಿಸಿದರೂ ಇದರ ವಿರುದ್ಧ ಹೋರಾಟಕ್ಕೂ ಮುಂದಾದರು. ಫೋನ್ ಕಾಲ್ ಬರುವುದು ಜಾಸ್ತಿ ಆಗುತ್ತಿದ್ದಂತೆಯೇ ಇವರು ಬಂದ ಒಂದು ಫೋನ್ ನಂಬರ್‍ಗೆ ಮತ್ತೆ ಹಿಂದೆ ಕರೆ ಮಾಡಿದರು. ಬಳಿಕ ನನ್ನ ನಂಬರ್ ಎಲ್ಲಿ ಸಿಕ್ಕಿತು ಎಂದು ಅವನಲ್ಲಿ ಕೇಳಿದರು. ಆಗ ಆತ ವಾಟ್ಸ್‍ಅಪ್ ಗ್ರೂಪ್‍ನಲ್ಲಿ ಇವರ ಹೆಸರು ಹೇಗೆ `ಸೂಪರ್ ಐಟಂ’ ಅಂತ ಶೇರ್ ಆಗುತ್ತಿದೆ ಎಂಬುದನ್ನು ಬಾಯಿಬಿಟ್ಟ.

ಇದಾದ ಬಳಿಕ ಶ್ರೀಲಕ್ಷ್ಮಿ ಆ ವ್ಯಕ್ತಿಯನ್ನು ಗುರುತಿಸಿದ್ದಾರೆ. ಅಚ್ಚರಿ ಅಂದರೆ ಇವರಿಗೆ ಪರಿಚಯ ಇರುವ ವ್ಯಕ್ತಿಯೇ, ಇವರನ್ನು `ಚೇಚಿ’ ಅರ್ಥಾತ್ ಹಿರಿಯಕ್ಕ, ಸಹೋದರಿ ಎಂದು ಕರೆಯುವ ವ್ಯಕ್ತಿಯೇ ಈ ಕೃತ್ಯವೆಸಗಿದ್ದ. ಈತ ರಾಷ್ಟ್ರೀಯ ಪಕ್ಷವೊಂದರ ಪ್ರಧಾನಿ ಕಾರ್ಯದರ್ಶಿಯೂ ಆಗಿದ್ದ…! ಬಳಿಕ, ಇವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಆ ವ್ಯಕ್ತಿಯ ಪಕ್ಷ ದೂರು ನೀಡದಂತೆ ಕೋರ್ಟ್ ಹೊರಗೆಯೇ ಈ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಎಂದು ಇವರ ಮನವೊಲಿಸಿದರು. ಈ ವೇಳೆ, ಪಕ್ಷದಿಂದ ಆ ವ್ಯಕ್ತಿಯನ್ನು ಉಚ್ಛಾಟಿಸುವಂತೆ ಇವರು ಆಗ್ರಹಿಸಿದ್ದರು. ಆದರೆ, ಪಕ್ಷ ಹಾಗೆ ಮಾಡಲಿಲ್ಲ. ಹೀಗಾಗಿ, ಇವರು ಪೊಲೀಸರಿಗೆ ದೂರು ನೀಡಿದರು. ಈ ವೇಳೆ, ಆ ವ್ಯಕ್ತಿಯ ತಂದೆ ಮನೆಗೆ ಬಂದು ಮಗನನ್ನು ಕ್ಷಮಿಸುವಂತೆ ಕೇಳಿಕೊಂಡರು. ಈ ವೇಳೆ, ತನ್ನನ್ನು ಐಟಂ ಎಂದು ಕರೆದಿದ್ದ ಆ ವ್ಯಕ್ತಿ ಬಡವರಿಗೆ ಸಹಾಯ ಮಾಡುವ ಸಂಸ್ಥೆಗೆ 25 ಸಾವಿರ ರೂಪಾಯಿ ಧನಸಹಾಯ ಮಾಡಬೇಕು ಎಂದು ಕೇಳಿಕೊಂಡರು. ಅದರಂತೆಯೇ ಆ ವ್ಯಕ್ತಿ 25 ಸಾವಿರ ರೂಪಾಯಿ ದಾನ ಮಾಡಿದ್ದಾನೆ. ಈ ಕತೆಯನ್ನು ಶ್ರೀಲಕ್ಷ್ಮಿ ಫೇಸ್‍ಬುಕ್‍ಗೆ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

About sudina

Check Also

ಯುವತಿಯರೇ ಎಚ್ಚರ : ಪ್ರೀತಿಯ ಮಾಯೆಯಲ್ಲಿ ನಗ್ನ ಫೋಟೋ ಕಳುಹಿಸಿದ ಯುವತಿಗೆ ಸಾಲು ಸಾಲು ಸಂಕಷ್ಟ…!

ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್​. ಈಗಿನ ಸುದ್ದಿ ಕೂಡಾ …

Leave a Reply

Your email address will not be published. Required fields are marked *

error: Content is protected !!