Monday , May 21 2018
Home / Sudina Special / ಮಹಿಳಾ ಕ್ರಿಕೆಟ್ ತಂಡದ `ಲೇಡಿ ಸಚಿನ್’ : ಗ್ಲಾಮರ್ ಲೋಕದಲ್ಲೂ ಗಮನ ಸೆಳೆದ ಚೆಲುವೆ

ಮಹಿಳಾ ಕ್ರಿಕೆಟ್ ತಂಡದ `ಲೇಡಿ ಸಚಿನ್’ : ಗ್ಲಾಮರ್ ಲೋಕದಲ್ಲೂ ಗಮನ ಸೆಳೆದ ಚೆಲುವೆ

ಮುಂಬೈ : ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಥಿಲಿ ರಾಜ್ ಇತ್ತೀಚೆಗಷ್ಟೇ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ನಡುವೆ, ಮೈಥಿಲಿಗೆ ಖುಷಿ ಕೊಡುವ ಸುದ್ದಿಯೂ ಬಂದಿದೆ. ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಹೊಣೆಯೂ ಇವರಿಗೆ ಸಿಕ್ಕಿದೆ.

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್ ಗಳಿಸಿದ ಎರಡನೇ ಆಟಗಾರ್ತಿ ಮೈಥಿಲಿ ರಾಜ್. ಇದಾದ ಬಳಿಕವೇ ಇವರನ್ನು `ಲೇಡಿ ಸಚಿನ್’ ಎಂದು ಎಲ್ಲರೂ ಪ್ರೀತಿಯಿಂದ ಕರೆಯುತ್ತಾರೆ. ತನ್ನ 10ನೇ ವರ್ಷದಲ್ಲಿ ಕ್ರೀಡಾಲೋಕಕ್ಕೆ ಕಾಲಿಟ್ಟಿರುವ ಮೈಥಿಲಿ 17ನೇ ವಯಸ್ಸಿಗೆ ಭಾರತ ತಂಡವನ್ನು ಸೇರಿದ್ದರು. ಸದ್ಯದ ವರೆಗೆ ಮೈಥಿಲಿ 167 ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದು, 5407 ರನ್ ಗಳಿಸಿದ್ದಾರೆ. ಸುಲಭವಾಗಿ 5000 ರನ್ ಗಡಿ ಮುಟ್ಟಿದ ಆಟಗಾರ್ತಿಯೂ ಇವರಾಗಿದ್ದಾರೆ.

1999ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೈಥಿಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದರ್ಪಣೆ ಮಾಡಿದರು. ಅತೀ ಶೀಘ್ರದಲ್ಲಿ ಅತ್ಯಧಿಕ ರನ್ ಗಳಿಸಿದ ಇವರು 2002ರಲ್ಲಿ ತನ್ನ 19ನೇ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಆನ್ ಫೀಲ್ಡ್‍ನಲ್ಲಿ ಅದ್ಭುತ ಆಟಗಾರ್ತಿ ಆಗಿರುವ ಮೈಥಿಲಿ, ಆಫ್ ಫೀಲ್ಡ್‍ನ ಸ್ಟಾರ್ ಆಟಗಾರರಲ್ಲಿ ಗ್ಲಾಮರ್ ಆಗಿಯೂ ಮಿಂಚುತ್ತಿದ್ದಾರೆ. ತನ್ನ ಗ್ಲಾಮರ್ ಲುಕ್‍ನಿಂದಲೇ ಮೈಥಿಲಿ ಗಮನ ಸೆಳೆಯುತ್ತಿದ್ದಾರೆ.

About sudina

Check Also

ಯುವತಿಯರೇ ಎಚ್ಚರ : ಪ್ರೀತಿಯ ಮಾಯೆಯಲ್ಲಿ ನಗ್ನ ಫೋಟೋ ಕಳುಹಿಸಿದ ಯುವತಿಗೆ ಸಾಲು ಸಾಲು ಸಂಕಷ್ಟ…!

ಬೆಂಗಳೂರು : ಪ್ರೀತಿ ಎಂಬುದು ಮಾಯೆ. ಅದರಲ್ಲೂ ಹದಿಹರೆಯದ ಪ್ರೀತಿ ಇದೆಯಲ್ವಾ ಅದು ತುಂಬಾ ಡೇಂಜರ್​. ಈಗಿನ ಸುದ್ದಿ ಕೂಡಾ …

Leave a Reply

Your email address will not be published. Required fields are marked *

error: Content is protected !!