Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಕೊಹ್ಲಿ ಧೋನಿ ಉತ್ತರಾಧಿಕಾರಿ : ತಂಡಕ್ಕೆ ಮರಳಿದ ಯುವರಾಜ್ : ಕರುಣ್ ನಾಯರ್‍ಗೆ ಇಲ್ಲ ಚಾನ್ಸ್

ಕೊಹ್ಲಿ ಧೋನಿ ಉತ್ತರಾಧಿಕಾರಿ : ತಂಡಕ್ಕೆ ಮರಳಿದ ಯುವರಾಜ್ : ಕರುಣ್ ನಾಯರ್‍ಗೆ ಇಲ್ಲ ಚಾನ್ಸ್

ಮುಂಬೈ : ಟೀಂ ಇಂಡಿಯಾ ನಾಯಕನ ಪಟ್ಟ ವಿರಾಟ್ ಕೊಹ್ಲಿ ಮಡಿಲಿಗೆ, ತಂಡಕ್ಕೆ ಮತ್ತೆ ಮರಳಿದ ಯುವರಾಜ್ ಸಿಂಗ್, ಸಾಧನೆ ತೋರಿದ ಕರುಣ್ ನಾಯರ್‍ಗೆ ಇಲ್ಲ ಚಾನ್ಸ್…!

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ ಆಗಿದೆ. ಏಕದಿನ ಮತ್ತು ಟಿ20 ತಂಡವನ್ನು ಇವತ್ತು ಪ್ರಕಟಿಸಲಾಗಿದೆ. ಈ ಸುದ್ದಿಗೋಷ್ಠಿಯಲ್ಲೇ ವಿರಾಟ್‍ಗೆ ಅಧಿಕೃತವಾಗಿ ನಾಯಕನ ಪಟ್ಟವನ್ನೂ ಘೋಷಿಸಿಲಾಗಿದೆ.

ಇದೇ ವೇಳೆ, ಲಾಂಗ್ ಗ್ಯಾಪ್‍ನ ಬಳಿಕ ಯುವರಾಜ್ ಸಿಂಗ್ ಟೀಂ ಇಂಡಿಯಾಗೆ ಮರಳಿದ್ದಾರೆ. ಇದು ಯುವಿ ಅಭಿಮಾನಿಗಳಿಗೆ ಭಾರೀ ಖುಷಿ ತಂದಿದೆ.

ಇನ್ನು, ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಮನೀಶ್ ಪಾಂಡೆ ಮತ್ತು ಕೆ.ಎಸ್.ರಾಹುಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದ್ಕಡೆ, ಮೊನ್ನೆ ತ್ರಿಶತಕ ಸಿಡಿಸಿ ಗಮನ ಸೆಳೆದಿದ್ದ ಕನ್ನಡಿಗ ಕರುಣ್ ನಾಯರ್‍ಗೆ ಮಾತ್ರ ಈ ಬಾರಿ ಚಾನ್ಸ್ ಸಿಕ್ಕಿಲ್ಲ.

ಏಕದಿನ ತಂಡ : ವಿರಾಟ್ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್ ಧೋನಿ, ಕೆ.ಎಲ್.ರಾಹುಲ್, ಶಿಖರ್ ಧವನ್, ಮನೀಶ್ ಪಾಂಡೆ, ಕೇದರ್ ಜಾದವ್, ಯುವರಾಜ್ ಸಿಂಗ್, ಅಜಿಂಕ್ಯಾ ರಹಾನೆ, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವಿಂದ್ರ ಜಡೇಜಾ, ಅಮಿತ್ ಮಿಶ್ರಾ, ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್

ಟಿ 20 ತಂಡ : ವಿರಾಟ್ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್ ಧೋನಿ, ಕೆ.ಎಲ್.ರಾಹುಲ್, ಮಂದೀಪ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ರಿಶಬ್ ಪಂತ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವಿಂದ್ರ ಜಡೇಜಾ, ಯುಝುವೀಂದ್ರ ಚಹಾಲ್, ಮನೀಶ್ ಪಾಂಡೆ, ಕೇದರ್ ಜಾದವ್, ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಆಶಿಶ್ ನೆಹ್ರಾ

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!