Saturday , October 20 2018
ಕೇಳ್ರಪ್ಪೋ ಕೇಳಿ
Home / Gulf News / ಮನೆಯಲ್ಲಿ ಕ್ರೂರ ಪ್ರಾಣಿಗಳನ್ನು ಸಾಕುವುದು ಅರಬ್ ರಾಷ್ಟ್ರಗಳಲ್ಲಿ ಇನ್ನು ಕಾನೂನು ಬಾಹಿರ

ಮನೆಯಲ್ಲಿ ಕ್ರೂರ ಪ್ರಾಣಿಗಳನ್ನು ಸಾಕುವುದು ಅರಬ್ ರಾಷ್ಟ್ರಗಳಲ್ಲಿ ಇನ್ನು ಕಾನೂನು ಬಾಹಿರ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ದುಬೈ : ಅರಬ್ ರಾಷ್ಟ್ರಗಳಲ್ಲಿ ಹುಲಿ, ಚಿರತೆಯನ್ನು ಸಾಕುಪ್ರಾಣಿಗಳಂತೆ ಮನೆಯಲ್ಲೇ ಸಾಕುವುದು ದೊಡ್ಡ ಪ್ರತಿಷ್ಠೆ. ಆದರೆ, ಇನ್ನು ಮುಂದೆ ಮನೆಯಲ್ಲೇ ಕ್ರೂರ ಪ್ರಾಣಿಗಳನ್ನು ಸಾಕುವುದಕ್ಕೆ ಅವಕಾಶ ಇಲ್ಲ. ಈ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಅಪಾಯಕಾರಿ, ಕ್ರೂರ ಪ್ರಾಣಿಗಳನ್ನು ಸಾಕುಪ್ರಾಣಿಗಳಂತೆ ಮನೆಯಲ್ಲಿ ಸಲಹಲು ಇನ್ನು ಇಲ್ಲಿ ಅವಕಾಶ ಇಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಈ ಹೊಸ ನಿಯಮದ ಪ್ರಕಾರ ಮೃಗಾಲಯ, ವನ್ಯಜೀವಿಧಾಮ, ಸರ್ಕಸ್, ತಳಿ ಅಭಿವೃದ್ಧಿ ಕೇಂದ್ರ ಮತ್ತು ಸಂಶೋಧನ ಕೇಂದ್ರದಲ್ಲಿ ಮಾತ್ರ ಈ ಪ್ರಾಣಿಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ.

ಅರಬ್ ರಾಷ್ಟ್ರಗಳಲ್ಲಿ ಹುಲಿ, ಚಿರತೆಯಂತಹ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ದೊಡ್ಡ ಪ್ರತಿಷ್ಠೆ. ಈ ಪ್ರಾಣಿಗಳೊಂದಿಗೆ ಮನೆಯಲ್ಲಿ ಫೋಟೋ, ವೀಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದು ಕೂಡಾ ಈ ದೊಡ್ಡ ಕ್ರೇಝ್ ಆಗುತ್ತಿದೆ. ಹೀಗಾಗಿ, ಈ ನಿಯಮ ತರಲಾಗಿದೆ. ಹೊಸ ನಿಯಮದ ಪ್ರಕಾರ ಈ ಕ್ರೂರ ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆತಂದರೆ ಆರು ತಿಂಗಳ ಜೈಲುವಾಸ ಮತ್ತು ಅಪಾರ ದಂಡವನ್ನೂ ವಿಧಿಸಲಾಗುತ್ತದೆ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!