Tuesday , October 16 2018
ಕೇಳ್ರಪ್ಪೋ ಕೇಳಿ
Home / News NOW / ಕೆ.ಜಿ.ಹಳ್ಳಿ ಲೈಂಗಿಕ ಕಿರುಕುಳ ನಾಟಕದ ಆರೋಪಿ ಸಿಕ್ಕಿಬಿದ್ದಿದ್ದೇ ಆತನ ನಡಿಗೆಯಿಂದ…! : ಇಲ್ಲಿದೆ ವೀಡಿಯೋ

ಕೆ.ಜಿ.ಹಳ್ಳಿ ಲೈಂಗಿಕ ಕಿರುಕುಳ ನಾಟಕದ ಆರೋಪಿ ಸಿಕ್ಕಿಬಿದ್ದಿದ್ದೇ ಆತನ ನಡಿಗೆಯಿಂದ…! : ಇಲ್ಲಿದೆ ವೀಡಿಯೋ

ಬೆಂಗಳೂರು : ಲೈಂಗಿಕ ಕಿರುಕುಳದ ನಾಟಕವಾಡಿ ಸಿಕ್ಕಿಬಿದ್ದಿದ್ದ ಆರೋಪಿ ಇರ್ಷಾದ್ ಸಿಕ್ಕಿಬಿದ್ದ ಕತೆ ರೋಚಕ. ತನ್ನ ಹೆಂಡತಿಯ ತಂಗಿಯನ್ನು ಮದುವೆಯಾಗಲು ಸಂಚು ರೂಪಿಸಿದ್ದ ಇರ್ಷಾದ್ ಲೈಂಗಿಕ ಕಿರುಕುಳದ ಕತೆ ಕಟ್ಟಿದ್ದ. (Read Also : ಕೆ.ಜಿ.ಹಳ್ಳಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ : ಇದು ಇಬ್ಬರು ಸೇರಿ ಆಡಿದ್ದ ನಾಟಕ…! : ಬಯಲಾಯ್ತು ಬಾವ ನಾದಿನಿಯ ಕಪಟ…!) ಯುವತಿಗೆ ಕಿರುಕುಳ ನೀಡಿದಂತೆ ಮಾಡಿ ಪೊಲೀಸ್ ಠಾಣೆಗೂ ದೂರು ನೀಡಿದ್ದ. ಯುವತಿಯೊಂದಿಗೆ ಪೊಲೀಸ್ ಠಾಣೆಗೂ ಆತ ಬಂದಿದ್ದ. ಪೊಲೀಸರ ಮೇಲೆಯೇ ಆರೋಪ ಮಾಡಿ ಮಾಧ್ಯಮಗಳಿಗೂ ಸಿಸಿ ಕ್ಯಾಮೆರಾ ದೃಶ್ಯ ಬಿಡುಗಡೆ ಮಾಡಿದ್ದ… ಆದರೆ, ಆತನಿಗೆ ಗೊತ್ತಿರಲಿಲ್ಲ. ತನ್ನ ನಡಿಗೆಯ ಕಾರಣದಿಂದಲೇ ತಾನು ಸಿಕ್ಕಿಬೀಳುತ್ತೇನೆಂದು…?

ಕುಂಟುತಾ ಸಿಕ್ಕಿಬಿದ್ದಿದ್ದ…! : ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಇರುವ ವ್ಯಕ್ತಿ ಕುಂಟುತಾ ನಡೆಯುತ್ತಿದ್ದ. ಇತ್ತ, ಪೊಲೀಸರಿಗೆ ದೂರು ಕೊಡಲು ಬಂದಿದ್ದ ಯುವತಿಯೊಂದಿಗೆ ಬಂದಿದ್ದ ಇರ್ಷಾದ್ ಕೂಡಾ ಕುಂಟುತಾ ನಡೆಯುತ್ತಿದ್ದ. ಇದನ್ನು ಪೊಲೀಸರು ಗಮನಿಸಿದ್ದರು. ಅಲ್ಲಿಂದಲೇ ಇರ್ಷಾದ್ ಮೇಲೆ ಅನುಮಾನ ಶುರುವಾಗಿತ್ತು. ಇದೇ ನಿಟ್ಟಿನಲ್ಲಿ ಪೊಲೀಸರು ಕೂಡಾ ಗಮನ ಕೇಂದ್ರೀಕರಿಸಿದ್ದರು. ಕಡೆಗೆ ಇರ್ಷಾದ್ ಮತ್ತು ಯುವತಿ ಕಟ್ಟಿದ್ದ ಕತೆ ಏನೆಂದು ಗೊತ್ತಾಯ್ತು. ವಿಚಾರಣೆ ವೇಳೆ, ಇರ್ಷಾದ್ ತನ್ನ ತಪ್ಪನ್ನೂ ಒಪ್ಪಿಕೊಂಡಿದ್ದಾನೆ…

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!