Wednesday , January 24 2018
Home / Film News / Tollywood / ಬಾಕ್ಸ್ ಆಫೀಸ್‍ನಲ್ಲಿ ಚಿರಂಜೀವಿ – ಬಾಲಕೃಷ್ಣ ಕ್ಲ್ಯಾಶ್ : ಅಭಿಮಾನಿಗಳಿಗೆ ಆಂಧ್ರ ಪೊಲೀಸರ ಎಚ್ಚರಿಕೆ
Buy Bitcoin at CEX.IO

ಬಾಕ್ಸ್ ಆಫೀಸ್‍ನಲ್ಲಿ ಚಿರಂಜೀವಿ – ಬಾಲಕೃಷ್ಣ ಕ್ಲ್ಯಾಶ್ : ಅಭಿಮಾನಿಗಳಿಗೆ ಆಂಧ್ರ ಪೊಲೀಸರ ಎಚ್ಚರಿಕೆ

ಹೈದರಾಬಾದ್ : ಸಂಕ್ರಾಂತಿ ವೇಳೆಗೆ ಟಾಲಿವುಡ್‍ನ ಇಬ್ಬರು ದಿಗ್ಗಜರ ಚಿತ್ರ ರಿಲೀಸ್ ಆಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ `ಕೈದಿ ನಂಬರ್ 150’ ಮತ್ತು ನಂದಮೂರಿ ಬಾಲಕೃಷ್ಣ ಅಭಿನಯದ `ಗೌತಮಪುತ್ರ ಶಾತಕರ್ಣಿ’ ಚಿತ್ರ ಒಂದೇ ದಿನಗಳ ಅಂತರದಲ್ಲಿ ರಿಲೀಸ್ ಆಗುತ್ತಿದೆ.

ಇದು ಇಬ್ಬರು ನಟರ ಅಭಿಮಾನಿಗಳಿಗೆ ಖುಷಿ ತಂದರೆ ಆಂಧ್ರ ಪ್ರದೇಶ ಪೊಲೀಸರಿಗೆ ಮಾತ್ರ ದೊಡ್ಡ ತಲೆ ನೋವು ತಂದಿದೆ. ಹೀಗಾಗಿ, ಇಬ್ಬರ ನಟರ ಅಭಿಮಾನಿಗಳು ತಮ್ಮ ಎಲ್ಲೆಯನ್ನು ಮೀರಬಾರದು ಎಂದು ಆಂಧ್ರ ಪ್ರದೇಶ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. `ಚಿತ್ರವನ್ನು ನೋಡಿ ಎಂಜಾಯ್ ಮಾಡಿ. ಆದರೆ, ಯಾರೂ ತಮ್ಮ ಎಲ್ಲೆಯನ್ನು ದಾಟಬಾರದು. ಯಾವುದೇ ತೊಂದರೆ ಉಂಟುಮಾಡಬಾರದು. ಪರಸ್ಪರ ಕೆಸರೆರಚಾಟದಲ್ಲಿ ತೊಡಗಬಾರದು. ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿ ಬರಹಗಳನ್ನು ಹಾಕಬಾರದು. ಒಂದೊಮ್ಮೆ ಇಂತಹ ಪ್ರಕರಣ ಬೆಳಕಿಗೆ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಜಿಪಿ ಸಾಂಬಶಿವ ರಾವ್ ಹೇಳಿದ್ದಾರೆ.

ಕೈದಿ ನಂಬರ್ 150 ಜನವರಿ 11ಕ್ಕೆ ಮತ್ತು ಗೌತಮಪುತ್ರ ಶಾತಕರ್ಣಿ ಜನವರಿ 12ರಂದು ಬಿಡುಗಡೆ ಆಗುತ್ತಿದೆ. ಇದಕ್ಕಿಂತ ಮುಂಚೆಯೇ ಅಭಿಮಾನಿಗಳ ಸಮರ ಶುರುವಾಗಿದೆ. ಬಾಲಕೃಷ್ಣ ಅಭಿಮಾನಿಗಳು `ಬಾಲಕೃಷ್ಣ `ರಾಜ’ ಚಿರಂಜೀವಿ `ಕೈದಿ’’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಚಿರಂಜೀವಿ ಅಭಿಮಾನಿಗಳು `ಬಾಕ್ಸ್‍ಆಫೀಸನ್ನು ಆಳಲು ಬಾಸ್ ಬರುತ್ತಿದ್ದಾರೆ. ಇವರ ದಾರಿಯಲ್ಲಿ ಯಾವ ರಾಜನೂ ಉಳಿಯುವುದಿಲ್ಲ’ ಎಂದು ಬರೆದಿದ್ದಾರೆ. ಆದರೆ, ಈ ಸಮರದ ನಡುವೆ ಯಾರು ಬಾಕ್ಸ್ ಆಫೀಸನ್ನು ಆಳುತ್ತಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

CEX.IO Bitcoin Exchange

About sudina

Check Also

ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…?

ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ …

Leave a Reply

Your email address will not be published. Required fields are marked *

error: Content is protected !!