Monday , April 23 2018
Home / Film News / Bollywood / ಹೆಣ್ಮಕ್ಕಳನ್ನು ಗೌರವದಿಂದ ಕಾಣುವಂತೆ ಹೆತ್ತವರು ಗಂಡು ಮಕ್ಕಳಿಗೆ ಬುದ್ಧಿ ಕೇಳಬೇಕು : ಶಾರೂಖ್ ಖಾನ್

ಹೆಣ್ಮಕ್ಕಳನ್ನು ಗೌರವದಿಂದ ಕಾಣುವಂತೆ ಹೆತ್ತವರು ಗಂಡು ಮಕ್ಕಳಿಗೆ ಬುದ್ಧಿ ಕೇಳಬೇಕು : ಶಾರೂಖ್ ಖಾನ್

ಮುಂಬೈ : ಹೊಸವರ್ಷಾಚರಣೆ ನೆಪದಲ್ಲಿ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದಿದ್ದ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಕಿಂಗ್‍ಖಾನ್ ಶಾರೂಖ್ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಾಣುವಂತೆ ಪ್ರತೀ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿಹೇಳಬೇಕು ಎಂದು ಶಾರೂಖ್ ಹೇಳಿದ್ದಾರೆ.

ಶನಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಶಾರೂಖ್ ಬಳಿಕ ಮಾಧ್ಯಮದವರು ಬೆಂಗಳೂರಿನಲ್ಲಾದ ಘಟನೆ ಬಗ್ಗೆ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಶಾರೂಖ್, ಹೊಸವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆ ಖಂಡನೀಯ. ಪ್ರತಿಯೊಬ್ಬ ತಂದೆ, ತಾಯಿ ತಮ್ಮ ಗಂಡು ಮಕ್ಕಳಿಗೆ ಹೆಣ್ಮಕ್ಕಳನ್ನು ಗೌರವದಿಂದ ಕಾಣುವಂತೆ ಬುದ್ಧಿ ಹೇಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಾದ ಈ ಘಟನೆ ಬಗ್ಗೆ ಬಾಲಿವುಡ್‍ನ ಇತರ ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮೀರ್ ಖಾನ್, ವಿರಾಟ್ ಕೊಹ್ಲಿ ಸೇರಿದಂತೆ ಹಲವರು ತೀವ್ರ ಕಳವಳ ವ್ಯಕ್ತೊಡಿಸಿದ್ದರು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!