Monday , January 21 2019
ಕೇಳ್ರಪ್ಪೋ ಕೇಳಿ
Home / News NOW / ಕೆ.ಜಿ.ಹಳ್ಳಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ : ಇದು ಇಬ್ಬರು ಸೇರಿ ಆಡಿದ್ದ ನಾಟಕ…! : ಬಯಲಾಯ್ತು ಬಾವ ನಾದಿನಿಯ ಕಪಟ…!

ಕೆ.ಜಿ.ಹಳ್ಳಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ : ಇದು ಇಬ್ಬರು ಸೇರಿ ಆಡಿದ್ದ ನಾಟಕ…! : ಬಯಲಾಯ್ತು ಬಾವ ನಾದಿನಿಯ ಕಪಟ…!

ಬೆಂಗಳೂರು : ಚಿತೆಯಲ್ಲಿ ಚಳಿ ಕಾಯಿಸುವುದು ಎಂಬಂತಹ ಮಾತಿದೆ. ಆ ಮಾತು ಈ ಇಬ್ಬರಿಗೆ ಸರಿಯಾಗಿ ಅನ್ವಯವಾಗುತ್ತದೆ. ಹೊಸವರ್ಷಾಚರಣೆ ಸಂದರ್ಭದಲ್ಲಿ ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ಕಿರುಕುಳ ನಡೆದಿದ್ದ ಪ್ರಕರಣದಿಂದ ಇಡೀ ಬೆಂಗಳೂರಿನ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ. ಇದೇ ಸಂದರ್ಭದಲ್ಲಿ ಪರಿಸ್ಥಿತಿಯ `ಲಾಭ’ ಪಡೆಯಲು ಹೋಗಿ ಯುವಕ ಮತ್ತು ಯುವತಿ ಸಿಕ್ಕಿಬಿದ್ದಿದ್ದಾರೆ…

ಏನಿದು ಸುದ್ದಿ…? : ಮೊನ್ನೆ ಕೆ.ಜಿ ಹಳ್ಳಿಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಯುವತಿಯೊಬ್ಬಳನ್ನು ಯುವಕನೊಬ್ಬ ಎಳೆದಾಡಿ ತುಟಿಯೆಲ್ಲಾ ಕಚ್ಚಿದ್ದ ಎಂದು ಸುದ್ದಿಯಾಗಿತ್ತು. ಕೇಸು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸಂಜೆಯಷ್ಟೊತ್ತಿಗೆ ಇದು ಎಳೆದಾಡುವ ಸಂದರ್ಭದಲ್ಲಿ ತಾನೇ ತುಟಿ ಕಚ್ಚಿಕೊಂಡಿದ್ದೆ ಎಂದು ಯುವತಿ ಪೊಲೀಸರ ಮುಂದೆ ಹೇಳಿಕೊಂಡಿದ್ದಳು. ಆದರೆ, ಪೊಲೀಸರಿಗೆ ಈ ಪ್ರಕರಣದಲ್ಲಿ ಏನೋ ಬೇರೆಯದ್ದೇ ಕತೆ ಇದೆ ಎಂಬ ಅನುಮಾನ ಮೂಡಿತ್ತು. ಈ ನಿಟ್ಟಿನಲ್ಲಿ ವಿಚಾರಣೆ ಮುಂದುವರಿಸಿದಾಗ ಅಸಲಿ ಕತೆ ಬಯಲಾಗಿತ್ತು…!

ಅಸಲಿ ಕತೆ ಏನು…? : ಇಷ್ಟಕ್ಕೂ ಇದು ಆ ಯುವಕ ಮತ್ತು ಯುವತಿ ಹೆಣೆದಿರುವ ರೋಚಕ ಕತೆ…!. ಯುವತಿ ಮತ್ತು ಆಕೆಯ ಅಕ್ಕನ ಗಂಡ ಇರ್ಷಾದ್ ಪರಸ್ಪರ ಪ್ರೀತಿಸುತ್ತಿದ್ದರು…! ಮೂರು ವರ್ಷದಿಂದ ಇವರಿಬ್ಬರ ಪ್ರೇಮಕತೆ ನಡೆಯುತ್ತಿತ್ತು. ಆದರೆ, ಮದುವೆ ಆಗಲು ಇವರಿಗೊಂದು ದಾರಿ ಬೇಕಿತ್ತು. ಲೈಂಗಿಕ ಕಿರುಕುಳ ಎಂದು ಸುದ್ದಿ ಮಾಡಿದ ಬಳಿಕ ಆ ಯುವತಿಯನ್ನೂ ಯಾರೂ ಮದುವೆ ಆಗುವುದಿಲ್ಲ. ಬಳಿಕ ತಾನೇ ಮದುವೆ ಆಗಬಹುದು ಎಂಬ ಪ್ಲಾನ್ ಇವರದ್ದಾಗಿತ್ತು. ಇದಕ್ಕಾಗಿ ಈ ರೀತಿಯ ನಾಟಕವಾಗಿದ್ದರು ಇರ್ಷಾದ್ ಮತ್ತು ಯುವತಿ. ಕಮ್ಮನಹಳ್ಳಿಯಲ್ಲಿ ಹೊಸವರ್ಷದ ದಿನ ಯುವತಿಯನ್ನು ಎಳೆದಾಡಿದಂತಹ ಪ್ರಕರಣ ಇವರಿಗೆ ಇಲ್ಲಿ ಸ್ಫೂರ್ತಿ ನೀಡಿತ್ತು. ಹೀಗಾಗಿ, ಮೊಬೈಲ್‍ನಲ್ಲಿ ಇಬ್ಬರು ಚರ್ಚಿಸಿ ಈ ರೀತಿ ಪ್ಲಾನ್ ಮಾಡಿದ್ದರು…! ತಮ್ಮ ಸಂಚಿನಂತೆ ಮಾಡಿದ ಬಳಿಕ ಇಬ್ಬರು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ಬಳಿಕ ಆರೋಪಿ ಇರ್ಷಾದ್ ಮಾಧ್ಯಮಗಳ ಮುಂದೆ ಪೊಲೀಸರ ವಿರುದ್ಧವೂ ಕೂಗಾಡಿದ್ದ…!

ಆದರೆ, ಪೊಲೀಸರಿಗೆ ಒಟ್ಟು ಈ ಪ್ರಕರಣದ ಮೇಲೆ ಅನುಮಾನ ಇತ್ತು. ಹೀಗಾಗಿ, ಯುವತಿಯ ಕಾಲ್ ಲೀಸ್ಟ್ ನೋಡಿದಾಗ ಪ್ರಕರಣದ ತನಿಖೆಯ ದಿಕ್ಕೇ ಬಯಲಾಯ್ತು. ಇವರಿಬ್ಬರ ಬಣ್ಣ ಕೂಡಾ ಬಯಲಾಗಿತ್ತು…!

ನಾನು ಮೋಸ ಹೋದೆ…! : ಇಷ್ಟಕ್ಕೂ ಇಲ್ಲಿ ಮೋಸ ಹೋದವರು ಮತ್ತೊಬ್ಬರಿದ್ದಾರೆ. ಅವರು ಮುಜೀರ್ ಖಾನ್. ಇವರು ಸಿಸಿ ಕ್ಯಾಮೆರಾ ದೃಶ್ಯವನ್ನು ಕೊಟ್ಟವರು…! ಮುಜೀರ್ ಖಾನ್ ಅಂಗಡಿಯ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲೇ ಈ ಇಬ್ಬರ ನಾಟಕದ ದೃಶ್ಯ ಸೆರೆ ಆಗಿದ್ದು… ಇದಾದ ಬಳಿಕ ಇರ್ಷಾದ್ ಮುಜೀರ್ ಅಂಗಡಿಗೆ ತನ್ನ ಪತ್ನಿಯೊಂದಿಗೆ ಬಂದು ಏನೇನು ನಾಟಕವಾಡಿ ಸಿಸಿ ಕ್ಯಾಮೆರಾ ದೃಶ್ಯವನ್ನು ತೆಗೆದುಕೊಂಡು ಹೋಗಿದ್ದ. ಈತನ ಮಾತಿಗೆ ನಂಬಿ ಮುಜೀರ್ ಕೂಡಾ ಸಿಸಿ ಕ್ಯಾಮೆರಾ ದೃಶ್ಯವನ್ನು ಈತನ ಕೈಗಿಟ್ಟಿದ್ದರು. ಆದರೆ, ಪ್ರಕರಣದ ಅಸಲಿಯತ್ತು ಈಗ ಬಯಲಾದ ಬಳಿಕ ಮುಜೀರ್ ಬಹಳಷ್ಟು ಬೇಸರಗೊಂಡಿದ್ದಾರೆ. ನಾನು ಮೋಸ ಹೋಗಿದೆ. ನನ್ನನ್ನು ಇರ್ಷಾದ್ ಮೋಸ ಮಾಡಿದ. ಲೈಂಗಿಕ ದೌರ್ಜನ್ಯ ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾ ದೃಶ್ಯವನ್ನು ಕೊಟ್ಟಿದ್ದೆ. ನಿಜ ಗೊತ್ತಿದ್ದರೆ ಸಿಸಿ ಕ್ಯಾಮೆರಾ ದೃಶ್ಯವನ್ನು ಕೊಡುತ್ತಿರಲಿಲ್ಲ ಎಂದು ಇವರು ಹೇಳಿಕೊಂಡಿದ್ದಾರೆ.

ಪೊಲೀಸರು ಹೇಳಿದ್ದೇನು…? : ಇನ್ನು ಈ ಪ್ರಕರಣ ಭೇದಿಸಿದ ಬಳಿಕ ಬೆಂಗಳೂರು ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿ ನಡೆಸಿದರು. ದೂರು ನೀಡಿದ್ದ ಯುವತಿ ಮೇಲೆ ಮೊದಲಿನಿಂದಲೂ ಅನುಮಾನವಿತ್ತು. ದೂರು ನೀಡಲು ಬಂದಾಗ ಯುವತಿ ಜೊತೆ ಆರೋಪಿ ಇರ್ಷಾದ್ ಕೂಡಾ ಇದ್ದ. ಆಗ ಇರ್ಷಾದ್ ನಡೆ ತುಂಬಾ ಅನುಮಾನ ಮೂಡಿಸುವಂತಿತ್ತು. ಈ ಇರ್ಷಾದ್ ಮಾಧ್ಯಮಗಳಿಗೂ ಸಿಸಿ ಟಿವಿ ದೃಶ್ಯ ರಿಲೀಸ್ ಮಾಡಿದ್ದ. ಯುವತಿಯನ್ನು ಮದುವೆಯಾಗಲು ಇರ್ಷಾದ್ ಈ ಹೈಡ್ರಾಮಾ ಮಾಡಿದ್ದ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಇಂತಹ ವಂಚಕರು ಇರುವುದರಿಂದ ಬೆಂಗಳೂರಿನ ಮಾನ ಹರಾಜಾಗುತ್ತಿದೆ. ಏನೋ ಮಾಡಲು ಹೋಗಿ ಈ ಇಬ್ಬರು ಈಗ ತಾವೇ ಹೆಣೆದ ಬಲೆಗೆ ಬಿದ್ದಿದ್ದಾರೆ. ಇಂತಹ ಸೂಕ್ಷ್ಮ ಪ್ರಕರಣವನ್ನು ಭೇದಿಸಿದ ಬೆಂಗಳೂರು ಪೊಲೀಸರಿಗೊಂದು ಹ್ಯಾಟ್ಸ್ ಅಪ್ ಹೇಳಲೇಬೇಕು…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!