Tuesday , May 22 2018
Home / Sandalwood / ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕೆ.ಜೆ.ಯೇಸುದಾಸ್

ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕೆ.ಜೆ.ಯೇಸುದಾಸ್

ಉಡುಪಿ : ಖ್ಯಾತ ಗಾಯಕ, ಕೊಲ್ಲೂರು ಮೂಕಾಂಬಿಕೆ ಪರಮಭಕ್ತ ಕೆ.ಜೆ.ಯೇಸುದಾಸ್ 77ನೇ ಜನ್ಮದಿನದ ಖುಷಿಯಲ್ಲಿದ್ದಾರೆ. ತನ್ನ ಇಷ್ಟದೇವತೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಯೇಸುದಾಸ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕುಟುಂಬಸ್ಥರೊಂದಿಗೆ ದೇಗುಲಕ್ಕೆ ಆಗಮಿಸಿದ ಯೇಸುದಾಸ್ ಚಂಡಿಕಾ ಹೋಮ ನೆರವೇರಿಸಿದರು.

ಬಳಿಕ ಸ್ವರ್ಣಮುಖಿ ಮಂಟಪದಲ್ಲಿ ಯೇಸುದಾಸ್ ಗಾಯಸುಧೆ ಹರಿಸಿದರು. ನೂರಾರು ಭಕ್ತರು ಯೇಸುದಾಸ್ ಗಾಯನಕ್ಕೆ ಕಿವಿಯಾದರು. ಇದಾದ ಬಳಿಕ ಮಾತನಾಡಿದ ಯೇಸುದಾಸ್, ಸಂಗೀತವೇ ನನ್ನ ಉಸಿರು. ನನ್ನ ಉಸಿರಿರುವವರೆಗೂ ಹಾಡುವುದನ್ನು ನಿಲ್ಲಿಸುವುದಿಲ್ಲ. ನಿತ್ಯವೂ ನಾನು ಸಂಗೀತಾಭ್ಯಾಸ ಮಾಡುತ್ತೇನೆ. ನನ್ನ ಪಾಲಿಗೆ ಮೂಕಾಂಬಿಕೆ ದೇವಿಯೇ ಸುಪ್ರೀಂ. ಮೂಕಾಂಬಿಕೆ ತಾಯಿ ಆಶೀರ್ವಾದಕ್ಕಾಗಿ ಪ್ರತಿವರ್ಷ ಇಲ್ಲಿಗೆ ಬರುತ್ತಿದ್ದೇನೆ. ಯಾವುದೇ ಜಾತಿ ಭೇದವಿಲ್ಲದೆ ದೇವಿ ಎಲ್ಲರನ್ನು ಅನುಗ್ರಹಿಸುತ್ತಾಳೆ ಎಂದು ಯೇಸುದಾಸ್ ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!