Monday , July 23 2018
ಕೇಳ್ರಪ್ಪೋ ಕೇಳಿ
Home / Sandalwood / ಲೈಂಗಿಕ ದೌರ್ಜನ್ಯದ ವಿರುದ್ಧ ಕಾಳಿ ರೂಪ ತಾಳಿದ ಶೃತಿ ಹರಿಹರನ್

ಲೈಂಗಿಕ ದೌರ್ಜನ್ಯದ ವಿರುದ್ಧ ಕಾಳಿ ರೂಪ ತಾಳಿದ ಶೃತಿ ಹರಿಹರನ್

ಬೆಂಗಳೂರು : ಲೈಂಗಿಕ ಕಿರುಕುಳ ಈಗ ದೊಡ್ಡ ಹೆಮ್ಮಾರಿ ಆಗಿದೆ. ಬೆಂಗಳೂರಂತೂ ಇದೇ ವಿಷಯಕ್ಕೆ ತನ್ನ ಹೆಸರನ್ನು ಕೆಡಿಸಿಕೊಂಡಿದೆ. ಇದಾದ ಬಳಿಕ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂಬಂತೆ ಜಾಗೃತಿ ಕಾರ್ಯಕ್ರಮಗಳೂ ನಡೆಯುತ್ತಿವೆ.

ಈ ನಡುವೆ ಬೆಂಗಳೂರಿನ ಫೋಟೋಗ್ರಾಪರ್ ಅರ್ಜುನ್ ಕಾಮತ್ ಅವರು ಹೊಸದಾಗಿ ಫೋಟೋ ಡಾಕ್ಯುಮೆಂಟ್ರಿ ಮಾಡುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ವಿಷಯವನ್ನೇ ಪ್ರಮುಖವಾಗಿಟ್ಟುಕೊಂಡು ಈ ಡಾಕ್ಯುಮೆಂಟ್ರಿ ಸಿದ್ಧವಾಗುತ್ತಿದೆ.

ಸ್ಯಾಂಡಲ್‍ವುಡ್ ತಾರೆ ಶೃತಿ ಹರಿಹರನ್ ಈ ಫೋಟೋದಲ್ಲಿ ಕಾಳಿ ರೂಪ ತಾಳಿದ್ದಾರೆ. ನೊಂದ ಯುವತಿಯರಿಗೆ ನ್ಯಾಯಕೊಡುವ ದೇವತೆಯಂತೆ ಶೃತಿ ಅವರನ್ನು ಇಲ್ಲಿ ಚಿತ್ರಿಸಲಾಗಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!