Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / Mollywood / ಚಿತ್ರರಂಗಕ್ಕೆ ಮೋಹನ್‍ಲಾಲ್ ಗುಡ್‍ಬೈ…? : 600 ಕೋಟಿ ಚಿತ್ರದಲ್ಲಿ ನಟಿಸಿದ ಬಳಿಕ ಲಾಲ್ ನಿವೃತ್ತಿ…?

ಚಿತ್ರರಂಗಕ್ಕೆ ಮೋಹನ್‍ಲಾಲ್ ಗುಡ್‍ಬೈ…? : 600 ಕೋಟಿ ಚಿತ್ರದಲ್ಲಿ ನಟಿಸಿದ ಬಳಿಕ ಲಾಲ್ ನಿವೃತ್ತಿ…?

ತಿರುವನಂತಪುರಂ : ಮೋಹನ್‍ಲಾಲ್ ಅಭಿಮಾನಿಗಳಿಗೆ ಬೇಸರದ ಸಂಗತಿ… ಮೋಹನ್‍ಲಾಲ್ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಹೇಳುತ್ತಾರಂತೆ…! ಹೀಗೊಂದು ಸುದ್ದಿ ಈಗ ಹಬ್ಬಿದೆ. ಮೂರು ದಶಕಕ್ಕೂ ಅಧಿಕ ಕಾಲ ಮಾಲಿವುಡ್‍ನಲ್ಲಿ ಸೂಪರ್‍ಸ್ಟಾರ್ ಆಗಿ ಮೆರೆದಿರುವ ಮೋಹನ್‍ಲಾಲ್ ಬಹುಬಜೆಟ್ ಚಿತ್ರದ ಬಳಿಕ ಸಿನಿರಂಗದಿಂದ ದೂರವಾಗುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಂತ ಮಲಯಾಳಂನ ಪ್ರಸಿದ್ಧ ಸುದ್ದಿ ಸಂಸ್ಥೆ ವರದಿ ಮಾಡಿದೆ…

ಮೋಹನ್‍ಲಾಲ್ ಸುಮಾರು 600 ಕೋಟಿ ರೂಪಾಯಿ ವೆಚ್ಚದ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೋಹನ್‍ಲಾಲ್ ವೃತ್ತಿ ಬದುಕಿನ ಕೊನೆಯ ಚಿತ್ರವಾಗಲಿದೆ ಎಂಬುದು ಈ ವರದಿಯ ವಸ್ತು.
ಕಾದಂಬರಿಕಾರ ಎಂ.ಟಿ. ವಾಸುದೇವ್ ನಾಯರ್ ಅವರ `ರಂಡಮ್ ಓಝಾಮ್’ ಕಾದಂಬರಿ ಚಿತ್ರವಾಗುತ್ತಿದೆ. ಇದೇ ಚಿತ್ರಕ್ಕೆ 600 ಕೋಟಿ ರೂಪಾಯಿ ಬಜೆಟ್ ಇಡಲಾಗಿದೆ. ಮುಂದಿನ ವರ್ಷ ಈ ಚಿತ್ರ ಸೆಟ್ಟೇರಲಿದೆಯಂತೆ. `ರಂಡಮ್ ಓಝಾಮ್’ ಮಹಾಭಾರತದ ಭೀಮನಕಥೆಯನ್ನೊಳಗೊಂಡಿರುವ ಕಾದಂಬರಿ.

56 ವರ್ಷದ ಮೋಹನ್‍ಲಾಲ್ ದಕ್ಷಿಣ ಭಾರತದ ಚಿತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು, ಹಲವು ರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಮೋಹನ್‍ಲಾಲ್ ಬಾಜನರಾಗಿದ್ದಾರೆ.

About sudina

Check Also

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. …

Leave a Reply

Your email address will not be published. Required fields are marked *

error: Content is protected !!