Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / Hollywood / ತಾಂತ್ರಿಕ ಆಸ್ಕರ್ ಪ್ರಶಸ್ತಿಗೆ ಮೂಡುಬಿದರೆಯ ಕಿರಣ್ ಭಟ್ ಭಾಜನ

ತಾಂತ್ರಿಕ ಆಸ್ಕರ್ ಪ್ರಶಸ್ತಿಗೆ ಮೂಡುಬಿದರೆಯ ಕಿರಣ್ ಭಟ್ ಭಾಜನ

ಮೂಡಬಿದಿರೆ : ಹಾಲಿವುಡ್ ಸಿನಿಲೋಕದಲ್ಲಿ ಈಗ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಹೆಸರು ಮುಗಿಲೆತ್ತರಕ್ಕೆ ಹಾರಿದೆ. ಮೂಡುಬಿದಿರೆ ಮೂಲದ ಕಿರಣ್ ಭಟ್ ಹಾಲಿವುಡ್‍ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅಲ್ಲದೆ, ತನ್ನ ತಾಂತ್ರಿಕ ಸಾಧನೆಗಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಸದ್ಯ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ವಾಸವಾಗಿರುವ ಕಿರಣ್ `ಐಎಲ್‍ಎಂ ಫೇಸಿಯಲ್ ಪರ್ ಫಾರ್ಮೆನ್ಸ್-ಕ್ಯಾಪಛಿರ್ ಸಾಲ್ವಿಂಗ್ ಸಿಸ್ಟಮ್’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನ ಬಾಲಿವುಡ್‍ನ ಹಲವು ಸೂಪರ್‍ಹಿಟ್ ಚಿತ್ರಗಳಲ್ಲಿ ಬಳಸಲಾಗಿದ್ದು, ಈ ತಂತ್ರಜ್ಞಾನಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಫೆಬ್ರವರಿ 11ಕ್ಕೆ ಅಮೆರಿಕದ ಬೆವೆರ್ಲಿ ವಿಲ್‍ಶೈರ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಿರಣ್ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ…

ಮೂಡುಬಿದಿರೆಯಿಂದ ಕೆಲವೇ ಕಿಲೋಮೀಟರ್ ದೂರ ಇರುವ ಕಡಂದಲೆ ಕಿರಣ್ ಭಟ್ ಅವರ ಮೂಲ ಊರು. ಸದ್ಯ ಇವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಕೈಗಾರಿಕಾ ಉದ್ಯಮಿಯಾಗಿದ್ದಾರೆ. ಇವರು 15 ವರ್ಷ ವಿಪ್ರೋದಲ್ಲೂ ಕೆಲಸ ಮಾಡಿದ್ದರು.

ಪ್ರಶಸ್ತಿ ಸಂತಸ ತಂದಿದೆ : ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಬಳಿಕ ಮಾತನಾಡಿದ ಕಿರಣ್ ಭಟ್, ಪ್ರಶಸ್ತಿ ಸಂತಸ ತಂದಿದೆ ಎಂದು ಹೇಳಿದ್ದಾರೆ. ಇನ್ನು, ಇವರ ತಂದೆ ಕೆ.ಶ್ರೀನಿವಾಸ ಭಟ್ ಕೂಡಾ ಮಗನ ಸಾಧನೆಯನ್ನು ಕೊಂಡಾಡಿದ್ದಾರೆ. `ಇದು ನಮಗೆ ಹೆಮ್ಮೆಯ ಸಂಗತಿ’ ಎಂದು ಶ್ರೀನಿವಾಸ್ ಭಟ್ ಹೇಳಿದ್ದಾರೆ. ಆಸ್ಕರ್ ಪ್ರಶಸ್ತಿ ಪಡೆದ ಎಂಟನೇ ಭಾರತೀಯ ಕಿರಣ್ ಆಗಿದ್ದಾರೆ. ಆಸ್ಕರ್ ಪ್ರಶಸ್ತಿ ಪ್ರಕಟವಾದ ಸುದ್ದಿ ಕೇಳಿ ನಮಗೆ ಅರೆ ಕ್ಷಣ ನಂಬುದಕ್ಕೆಯೇ ಆಗಲಿಲ್ಲ. ಜೂನ್ ನಾಲ್ಕಕ್ಕೇ ಈ ಪ್ರಶಸ್ತಿ ಘೋಷಿಸಲಾಯ್ತು. ನಮಗೆ ಜೂನ್ 5ಕ್ಕೆ ವಿಷಯ ತಿಳಿಯಿತು. ಆದರೆ, ಕಿರಣ್‍ಗೆ ಈ ಪ್ರಶಸ್ತಿ ಬಗ್ಗೆ ಹಿಂದೆಯೇ ಗೊತ್ತಿತ್ತು ಎಂದೆನಿಸುತ್ತದೆ. ಸತತ ಸಾಧನೆ ಮಾಡಿ ಕಿರಣ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ’ ಎಂಬುದು ಶ್ರೀನಿವಾಸ ಭಟ್ ಅವರ ಮಾತು.

1986ರಿಂದ ಕಿರಣ್ ಕೊಯಂಬತ್ತೂರಿನಲ್ಲಿದ್ದಾರೆ. ಇದಕ್ಕಿಂತ ಮೊದಲು ಇವರು ತ್ರಿವೆಂಡ್ರಮ್‍ನಲ್ಲಿದ್ದರು.

About sudina

Leave a Reply

Your email address will not be published. Required fields are marked *

error: Content is protected !!