Wednesday , January 24 2018
Home / Film News / Bollywood / ನನ್ನ ಮಗಳು, ಸಹೋದರಿಯರಿಗೆ ಲೈಂಗಿಕ ಕಿರುಕುಳವಾದರೆ ಮೊದಲು ಆತನ ತಲೆ ಹೊಡೆದ್ತಾಕ್ತೀನಿ : ನಾನಾ ಪಾಟೇಕರ್: ಇಲ್ಲಿದೆ ವೀಡಿಯೋ
Buy Bitcoin at CEX.IO

ನನ್ನ ಮಗಳು, ಸಹೋದರಿಯರಿಗೆ ಲೈಂಗಿಕ ಕಿರುಕುಳವಾದರೆ ಮೊದಲು ಆತನ ತಲೆ ಹೊಡೆದ್ತಾಕ್ತೀನಿ : ನಾನಾ ಪಾಟೇಕರ್: ಇಲ್ಲಿದೆ ವೀಡಿಯೋ

ಮುಂಬೈ : ಸದ್ಯ ದೇಶದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಅಧಿಕವಾಗುತ್ತಿದೆ. ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಂಗಳೂರು ಮಾತ್ರವಲ್ಲದೆ ದೇಶದ ನಾನಾ ಭಾಗದಲ್ಲೂ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಲೇ ಇದೆ. ಬಾಲಿವುಡ್‍ನ ಅನೇಕರು ಇಂತಹ ಪ್ರಕರಣಗಳನ್ನು ಖಂಡಿಸಿದ್ದಾರೆ. ಇದೀಗ ಬಾಲಿವುಡ್‍ನ ಮತ್ತೋರ್ವ ನಟ ನಾನಾ ಪಾಟೇಕರ್ ಬಲು ಕಟು ಶಬ್ದಗಳಿಂದಲೇ ಕಾಮುಕರ ವಿರುದ್ಧ ಪ್ರಹಾರ ಮಾಡಿದ್ದಾರೆ.

ನಾನಾ ಹೇಳಿದ್ದು : ಹುಡುಗಿಯರು ಹಿಂದೆಯೂ ಪಾಶ್ಚಾತ್ಯ ಶೈಲಿಯಂತೆ ಬಟ್ಟೆಬರೆ ಧರಿಸುತ್ತಿದ್ದರು. ಆದರೆ, ಆಗ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಇಲ್ಲಿ ಸಮಸ್ಯೆ ಇರುವುದು ಹುಡುಗಿಯರಿಂದ ಮತ್ತು ಅವರು ಧರಿಸುವ ಬಟ್ಟೆಯಿಂದ ಅಲ್ಲ. ನಾವು ಯೋಚಿಸುವ ರೀತಿಯಲ್ಲಿ ಸಮಸ್ಯೆ ಇರುವುದು. ಇಂತಹ ಘಟನೆ ನಡೆದ ತಕ್ಷಣ ಪೊಲೀಸರು ಕಾಮುಕರನ್ನು ಸರಿಯಾಗಿ ದಂಡಿಸುತ್ತಿದ್ದರು. ಈಗ ಹೀಗೆ ಮಾಡಿದರೆ ಮಾನವ ಹಕ್ಕು ಹೋರಾಟಗಾರರು ಬಂದು ನಿಮ್ಮನ್ನು ಪ್ರಶ್ನೆ ಕೇಳಲಾರಂಭಿಸುತ್ತಾರೆ. ಒಂದೊಮ್ಮೆ ನನ್ನ ಮಗಳು ಅಥವಾ ಸಹೋದರಿಯರಿಗೆ ಈ ರೀತಿ ಲೈಂಗಿಕ ಕಿರುಕುಳವಾದರೆ ಮೊದಲು ಆತನ ತಲೆ ಹೊಡೆದು ಹಾಕ್ತೀನಿ. ಬಳಿಕ ಬರುವ ಪರಿಸ್ಥಿತಿಯನ್ನು ನಾನು ನಿಭಾಯಿಸುತ್ತೇನೆ.

CEX.IO Bitcoin Exchange

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!