Monday , January 21 2019
ಕೇಳ್ರಪ್ಪೋ ಕೇಳಿ
Home / News NOW / ಏರ್ ಇಂಡಿಯಾ ಫ್ಲೈಟ್‍ನಲ್ಲಿ ಇನ್ನು ಮುಂದಿನ 6 ಸೀಟುಗಳು ಮಹಿಳೆಯರಿಗೆ ಮೀಸಲು

ಏರ್ ಇಂಡಿಯಾ ಫ್ಲೈಟ್‍ನಲ್ಲಿ ಇನ್ನು ಮುಂದಿನ 6 ಸೀಟುಗಳು ಮಹಿಳೆಯರಿಗೆ ಮೀಸಲು

ನವದೆಹಲಿ : ವಿಶ್ವದಲ್ಲಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಮಹಿಳೆಯರಿಗೆ ಸೀಟು ಮೀಸಲಿಡುವ ಹೆಜ್ಜೆಯನ್ನು ಭಾರತ ಕೈಗೊಂಡಿದೆ. ಇನ್ನು ಮುಂದೆ ಏರ್ ಇಂಡಿಯಾ ದೇಸಿ ವಿಮಾನದಲ್ಲೂ ಮಹಿಳೆಯರಿಗೆ ಸೀಟು ಮೀಸಲಾಗಲಿದೆ. ಮುಂದಿನ ಆರು ಸೀಟುಗಳು ಇನ್ನು ಮುಂದೆ ಮಹಿಳೆಯರಿಗೆ ಮೀಸಲು. ಜನವರಿ 18 ರಿಂದ ಈ ನಿಯಮ ಜಾರಿಗೆ ಬರಲಿದೆ.

ವಿಮಾನದಲ್ಲಿ ಮಹಿಳೆಯರಿಗೆ ಸೀಟು ಮೀಸಲಿಟ್ಟಿರುವುದು ವಿಶ್ವದಲ್ಲಿ ಇದೇ ಮೊದಲು. ಭಾರತದ ಇತರ ಸಂಚಾರ ಸೇವೆಗಳಾದ ರೈಲು, ಮೆಟ್ರೋ ಮತ್ತು ಬಸ್‍ನಲ್ಲಿ ಈ ರೀತಿ ಮಹಿಳೆಯರಿಗೆ ಆಸನಗಳು ಮೀಸಲಿವೆ. ಈ ಸಾಲಿಗೆ ಈಗ ವಿಮಾನವೂ ಸೇರಿದೆ. ಈ ರಿಸರ್ವೆಷನ್‍ಗೆ ಯಾವುದೇ ಚಾರ್ಜ್ ಕೂಡಾ ಇರುವುದಿಲ್ಲ.

ಕಳೆದ ತಿಂಗಳು ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!