Monday , January 22 2018
Home / News NOW / ರಾಜೀವ್ ಹತ್ಯೆ ಆರೋಪಿ ಶಿವರಸನ್‍ಗೆ ಬೆಂಗಳೂರಿನಲ್ಲಿ ಮನೆ ನೀಡಿದ್ದ ರಂಗನಾಥ್ ನಿಧನ
Buy Bitcoin at CEX.IO

ರಾಜೀವ್ ಹತ್ಯೆ ಆರೋಪಿ ಶಿವರಸನ್‍ಗೆ ಬೆಂಗಳೂರಿನಲ್ಲಿ ಮನೆ ನೀಡಿದ್ದ ರಂಗನಾಥ್ ನಿಧನ

ಬೆಂಗಳೂರು : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿ ಶಿವರಸನ್ ಆಪ್ತ ರಂಗನಾಥ್ ನಿಧನ. ಒಂದು ತಿಂಗಳ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ರಂಗನಾಥ್ ಕೊನೆಯುಸಿರೆಳೆದಿದ್ದಾಗಿ ಕುಟುಂಬ ಮೂಲಗಳು ತಿಳಿಸಿವೆ.

ಇವತ್ತು ಕೊನೆಯುಸಿರೆಳೆದಿರುವ ಶಿವರಸನ್ ಆಪ್ತ ರಂಗನಾಥ್

ಬೆಂಗಳೂರಿನ ಕೋಣನಕುಂಟೆಯಲ್ಲಿ ರಂಗನಾಥ್ ಮನೆ ಇದೆ. ರಂಗನಾಥ್ ಒಂಟಿಕಣ್ಣು ಶಿವರಸನ್‍ನ ಆಪ್ತ. ರಂಗನಾಥ್ ವಿರುದ್ಧ ಹತ್ಯೆಗೆ ಸಹಕರಿಸಿದ್ದ ಆರೋಪವಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗನಾಥ್‍ಗೆ 9 ವರ್ಷ ಜೈಲು ಶಿಕ್ಷೆ ಕೂಡಾ ಆಗಿತ್ತು.

ಸೈನೈಡ್ ಸೇವಿಸಿ ಪ್ರಾಣಬಿಟ್ಟಿದ್ದ ಎಲ್‍ಟಿಟಿಇಯ ಶಿವರಸನ್ ಮತ್ತು ಶುಭಾ ಮೃತದೇಹ
ರಾಜೀವ್ ಗಾಂಧಿ ಹತ್ಯೆ ಆರೋಪಿಗಳು ಅಡಗಿದ್ದ ಕೋಣನಕುಂಟೆಯ ಮನೆ
ವಿವಿಧ ಗೆಟಪ್‍ನಲ್ಲಿ ಎಲ್‍ಟಿಟಿಇಯ ಶಿವರಸನ್

ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಹತ್ಯೆ ನಡೆಸಿದ ಬಳಿಕ ಶಿವರಸನ್ ನೇತೃತ್ವದ ಆರೋಪಿಗಳ ತಂಡ ಬೆಂಗಳೂರಿನ ಕೋಣನಕುಂಟೆಯ ಮನೆಯಲ್ಲಿ ಅವಿತಿತ್ತು. ಇವರ ಸುಳಿವು ಸಿಕ್ಕ ಬೆಂಗಳೂರು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಇವರೆಲ್ಲಾ ಸೈನೈಡ್ ಸೇವಿಸಿ ಪ್ರಾಣಬಿಟ್ಟಿದ್ದರು. ಇಲ್ಲಿ ಶಿವರಸನ್‍ಗೆ ಆಶ್ರಯ ನೀಡಿದ್ದು ಇದೇ ರಂಗನಾಥ್ ಎಂದು ಹೇಳಲಾಗುತ್ತಿದೆ.

ಫೋಟೋ ಕೃಪೆ : ಇಂಟರ್‍ನೆಟ್

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!