Saturday , September 22 2018
ಕೇಳ್ರಪ್ಪೋ ಕೇಳಿ
Home / Film News / Bollywood / ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಸೇರಿ ಹಲವರಿಗೆ ಸಮನ್ಸ್

ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಸೇರಿ ಹಲವರಿಗೆ ಸಮನ್ಸ್

ಜೋಧ್‍ಪುರ : 1998ರ ಕೃಷ್ಣಮೃಗ ಬೇಟೆ ಪ್ರಕರಣ ಮತ್ತೆ ಸಲ್ಮಾನ್‍ರನ್ನು ಕಾಡಲಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್‍ಗೆ ಜೋಧ್‍ಪುರ ಕೋರ್ಟ್ ಸಮನ್ಸ್ ನೀಡಿದೆ. ಅಲ್ಲದೆ, ಇದೇ ತಿಂಗಳ 25ರಂದು ಹಾಜರಾಗುವಂತೆ ಆದೇಶ ನೀಡಿದೆ.

1998ರ ಸೆಪ್ಟೆಂಬರ್‍ನಲ್ಲಿ `ಹಮ್ ಸಾತ್ ಸಾತ್ ಹೈ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೃಷ್ಣ ಮೃಗ ಬೇಟೆಯಾಡಿದ್ದ ಪ್ರಕರಣ ನಡೆದಿತ್ತು. ಬಾಲಿವುಡ್‍ನ ಐವರು ಕಲಾವಿದರ ಮೇಲೆ ಈ ಆರೋಪ ಇತ್ತು. ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಎರಡು ಕೃಷ್ಣಮೃಗವನ್ನು ಬೇಟೆಯಾಡಿದ್ದರು ಎಂದು ದೂರಲಾಗಿತ್ತು.

ಇದಾದ ಬಳಿಕ ಇವರ ವಿರುದ್ಧ ದೂರು ನೀಡಲಾಗಿತ್ತು. ಪ್ರಕರಣ ನಡೆದು ಐದು ದಿನಗಳ ಬಳಿಕ ಸಲ್ಮಾನ್ ಬಂಧಕ್ಕೊಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. 2006ರ ಏಪ್ರಿಲ್‍ನಲ್ಲಿ ಅಧೀನ ನ್ಯಾಯಾಲಯ ಸಲ್ಮಾನ್ ದೋಷಿ ಎಂದು ತೀರ್ಪು ನೀಡಿ ಐದು ವರ್ಷ ಜೈಲು ಮತ್ತು ಐದು ಸಾವಿರ ದಂಡ ವಿಧಿಸಿತ್ತು. ಬಳಿಕ ಅಕ್ಟೋಬರ್‍ನಲ್ಲಿ ಸೆಷನ್ಸ್ ಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದು ಸಲ್ಮಾನ್ ಅರ್ಜಿ ವಜಾ ಮಾಡಿತ್ತು.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!