Wednesday , January 23 2019
ಕೇಳ್ರಪ್ಪೋ ಕೇಳಿ
Home / Sandalwood / ಸ್ಯಾಂಡಲ್‍ವುಡ್‍ನಲ್ಲಿ ಒಳ್ಳೆಯ ಬೆಳವಣಿಗೆ : ಗೆದ್ದ ಕಿರಿಕ್ ಪಾರ್ಟಿ ತಂಡಕ್ಕೆ ಕಿಚ್ಚ ಸುದೀಪ್ ಪಾರ್ಟಿ

ಸ್ಯಾಂಡಲ್‍ವುಡ್‍ನಲ್ಲಿ ಒಳ್ಳೆಯ ಬೆಳವಣಿಗೆ : ಗೆದ್ದ ಕಿರಿಕ್ ಪಾರ್ಟಿ ತಂಡಕ್ಕೆ ಕಿಚ್ಚ ಸುದೀಪ್ ಪಾರ್ಟಿ

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಒಳ್ಳೆಯ ಬೆಳವಣಿಗೆಯೊಂದು ನಡೆದಿದೆ. ಯಾವುದೇ ಚಿತ್ರ ಗೆದ್ದರೆ ಆ ಚಿತ್ರತಂಡ ಸಂಭ್ರಮಾಚರಣೆ ಮಾಡುತ್ತದೆ, ಖುಷಿ ಹಂಚಿಕೊಳ್ಳುತ್ತದೆ. ಆದರೆ, ಇದೆಲ್ಲಕ್ಕಿಂತ ಭಿನ್ನ ಎಂಬಂತೆ ಕಿಚ್ಚ ಸುದೀಪ್ ಹೊಸ ಮಾರ್ಗ ಹಾಕಿ ಕೊಟ್ಟಿದ್ದಾರೆ.

ಕನ್ನಡದ ಚಿತ್ರರಂಗದಲ್ಲಿ ಯಶಸ್ಸಿನ ನಾಗಾಲೋಟದಲ್ಲಿ ಓಡುತ್ತಿರುವ `ಕಿರಿಕ್ ಪಾರ್ಟಿ’ ಚಿತ್ರ ತಂಡಕ್ಕೆ ಕಿಚ್ಚ ಸುದೀಪ್ ಪಾರ್ಟಿ ಕೊಟ್ಟಿದ್ದಾರೆ. ಈ ಮೂಲಕ ಗೆಲುವನ್ನು ಆಚರಿಸುವುದರೊಂದಿಗೆ ಹೊಸ ಪ್ರಯತ್ನಕ್ಕೆ ಕಿಚ್ಚ ಪ್ರೋತ್ಸಾಹ ನೀಡಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಪಾರ್ಟಿಯಲ್ಲಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಶಬ್ ಶೆಟ್ಟಿ, ಸಂಯುಕ್ತಾ ಹೆಗಡೆ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಪಾರ್ಟಿ ಫೋಟೋವನ್ನು ರಿಶಬ್, ರಕ್ಷಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ, ಕಿಚ್ಚ ಸುದೀಪ್‍ಗೂ ಧನ್ಯವಾದ ಹೇಳಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!