Friday , October 19 2018
ಕೇಳ್ರಪ್ಪೋ ಕೇಳಿ
Home / Film News / Kollywood / ಜಲ್ಲಿಕಟ್ಟು ವಿರೋಧಿ `ಪೆಟಾ’ವನ್ನು ಬೆಂಬಲಿಸಿದ ತ್ರಿಶಾ : ತಮಿಳರ ತೀವ್ರ ಆಕ್ರೋಶ

ಜಲ್ಲಿಕಟ್ಟು ವಿರೋಧಿ `ಪೆಟಾ’ವನ್ನು ಬೆಂಬಲಿಸಿದ ತ್ರಿಶಾ : ತಮಿಳರ ತೀವ್ರ ಆಕ್ರೋಶ

ಚೆನ್ನೈ : ತಮಿಳುನಾಡಿನ ಪ್ರಮುಖ ಜನಪದ ಕ್ರೀಡೆ ಜಲ್ಲಿಕಟ್ಟಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಆದರೆ, ಜಲ್ಲಿಕಟ್ಟು ಬೇಕೇ ಬೇಕು ಎಂದು ಹೇಳುತ್ತಿರುವ ತಮಿಳುನಾಡಿನ ಜನ ಬೀದಿಗಿಳಿದಿದ್ದಾರೆ. ಸಿನೆಮಾ ನಟರೂ ಈ ಪ್ರತಿಭಟನೆಗೆ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ತ್ರಿಶಾ ಮಾತ್ರ ತಮಿಳರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಜಲ್ಲಿಕಟ್ಟು ವಿರೋಧಿಸುವ `ಪೆಟಾ’ವನ್ನು ಬೆಂಬಲಿಸಿದ್ದಕ್ಕೆ ಈಗ ತ್ರಿಶಾ ತಮಿಳು ಜನರ ಪಾಲಿಗೆ ವಿಲನ್ ಆಗಿದ್ದಾರೆ. `ಘರ್ಜನೈ’ ಚಿತ್ರದ ಶೂಟಿಂಗ್‍ನಲ್ಲಿ ತ್ರಿಶಾ ಪಾಲ್ಗೊಂಡಿದ್ದರು. ಇಲ್ಲಿಗೆ ಬಂದ ಹೋರಾಟಗಾರರ ತಂಡ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ಬಿಸಿಯಿಂದ ತ್ರಿಶಾ ಶೂಟಿಂಗ್‍ನಿಂದ ಅರ್ಧದಿಂದಲೇ ಮನೆಗೆ ಮರಳಿದ್ದಾರೆ.

ಈ ಘಟನೆ ಬಳಿಕ ತ್ರಿಶಾ ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ತಾನು ಭದ್ರವಾಗಿ ಮನೆಗೆ ಸೇರಲು ಸಹಾಯ ಮಾಡಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು, ತಾನು ಜಲ್ಲಿಕಟ್ಟಿನ ವಿರುದ್ಧವಾಗಿ ಮಾತನಾಡಿರಲಿಲ್ಲ ಎಂಬುದನ್ನೂ ತ್ರಿಶಾ ಸ್ಪಷ್ಟಪಡಿಸಿದ್ದಾರೆ.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!