Wednesday , January 24 2018
Home / News NOW / ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವಕ್ಕೆ ವರ್ಣರಂಜಿತ ಚಾಲನೆ
Buy Bitcoin at CEX.IO

ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವಕ್ಕೆ ವರ್ಣರಂಜಿತ ಚಾಲನೆ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಷ್ಟ್ರೀಯ ಸಾಂಸ್ಕøತಿಕ ಹಬ್ಬ ‘ಆಳ್ವಾಸ್ ವಿರಾಸತ್’ಗೆ ಸಂಭ್ರಮದ ಚಾಲನೆ ಸಿಕ್ಕಿದೆ. 23ನೇ ವರ್ಷದ ಈ ಸಾಂಸ್ಕøತಿಕ ಹಬ್ಬಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ಇದಾದ ಬಳಿಕ ಮಾತನಾಡಿದ ಅವರು ವೀರೇಂದ್ರ ಹೆಗ್ಗಡೆ, ನಾವು ವಿಶ್ವ ಮಾನವರಾಗುವುದು ಮುಖ್ಯ ಎಂದರು
ಇದಕ್ಕೂ ಮೊದಲು ಸಾಂಸ್ಕೃತಿಕ ತಂಡಗಳ ಆಕರ್ಷಕ ಮೆರವಣಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಈ ವರ್ಷದ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಪದ್ಮಭೂಷಣ ವಿ.ಪಿ.ಧನಂಜಯನ್ ಅವರಿಗೆ ಪ್ರದಾನ ಮಾಡಲಾಯಿತು. ಧನಂಜಯ ಅವರು ಮೂಲತ ಕೇರಳದ ಪಯ್ಯನ್ನೂರಿನವರು. ಭರತನಾಟ್ಯ ಮತ್ತು ಕಥಕ್ಕಳಿ ನಾಟ್ಯ ಪ್ರಕಾರಗಳ ಸಾಧನೆಗಾಗಿ ಪ್ರಸಿದ್ಧರಾಗಿದ್ದಾರೆ.

ಮೊದಲನೆಯ ದಿನ ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಳ ಮೇರು ಕಲಾವಿದ ಶಂಶಾಕ್ ಸುಬ್ರಹ್ಮಣ್ಯಂ ಹಾಗೂ ಪ್ರವೀಣ್ ಗೋಡ್ಕಿಂಡಿ ಅವರ ಕೊಳಲು-ಬಾನ್ಸುರಿ ಜುಗಲ್ ಬಂದಿ ಕಲಾರಸಿಕರ ಮನಸೂರೆಗೊಂಡಿತು. ಪಕ್ಕವಾದ್ಯದಲ್ಲಿ ಮೃದಂಗ ವಿದ್ವಾನ್ ಭಕ್ತವತ್ಸಲಂ ಹಾಗೂ ತಬ್ಲಾದಲ್ಲಿ ಪಂಡಿತ್ ಶುಭಂಕರ್ ಬ್ಯಾನರ್ಜಿ ಸಾಥ್ ನೀಡಿದರು.

ಬಯಲು ರಂಗ ಮಂದಿರದಲ್ಲಿ ಸಾವಿರಾರು ಜನ ಈ ಸಾಂಸ್ಕøತಿಕ ಹಬ್ಬದ ಸವಿ ಸವಿದರು.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!