Saturday , February 16 2019
ಕೇಳ್ರಪ್ಪೋ ಕೇಳಿ
Home / Sudina Special / ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ : ಇಲ್ಲಿದೆ ವೀಡಿಯೋ

ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ : ಇಲ್ಲಿದೆ ವೀಡಿಯೋ

ಬೆಂಗಳೂರು : ರಾಜಧಾನಿ ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣದಂದು ದೇವರಿಗೆ ಸೂರ್ಯಾಭಿಷೇಕ ನಡೆದಿದೆ. ಪಥ ಬದಲಾಯಿಸಿದ ಸೂರ್ಯ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸಿದೆ. ಸಾವಿರಾರು ಭಕ್ತರು ಈ ದೃಶ್ಯವನ್ನು ಕಂಡು ಪುಳಕಗೊಂಡಿದ್ದಾರೆ.

ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರಯಾಣಿಸುವ ಸೂರ್ಯನ ಕಿರಣಗಳು ದೇಗುಲದ ಬಲಬದಿ ಕಿಂಡಿಯಿಂದ ಪ್ರವೇಶಿಸಿ, ನಂದಿಯ ಕೊಂಬಿನ ಮೂಲಕ ರಶ್ಮಿಯ ಶಿವನ ಪಾದ ಸ್ಪರ್ಶ ಮಾಡುತ್ತದೆ. ಪಾಣಿಪೀಠದಿಂದ ನಿಧಾನವಾಗಿ ಶಿವಲಿಂಗದ ಪೂರ್ತಿ ಸೂರ್ಯರಶ್ಮಿ ವ್ಯಾಪಿಸುತ್ತದೆ.

ಗವಿಪುರಂ ಗುಟ್ಟಹಳ್ಳಿಯಲ್ಲಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಈ ದೃಶ್ಯವನ್ನು ಕಂಡ ಭಕ್ತರು ಪುಳಕಗೊಂಡಿದ್ದಾರೆ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!