Wednesday , March 27 2019
ಕೇಳ್ರಪ್ಪೋ ಕೇಳಿ
Home / Film News / Bollywood / ಅಮೀರ್‍ಗೆ ಉತ್ತಮ ನಟ, ಆಲಿಯಾ ಭಟ್‍ಗೆ ಉತ್ತಮ ನಟಿ ಗೌರವ

ಅಮೀರ್‍ಗೆ ಉತ್ತಮ ನಟ, ಆಲಿಯಾ ಭಟ್‍ಗೆ ಉತ್ತಮ ನಟಿ ಗೌರವ

ಮುಂಬೈ: 62ನೇ ಜಿಯೋ ಫಿಲಂ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ನಡೆದಿದೆ. ದಂಗಲ್ ಚಿತ್ರದ ಅಭಿನಯಕ್ಕಾಗಿ ಅಮೀರ್ ಖಾನ್ ಉತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ಉಡ್ತಾ ಪಂಜಾಬ್ ಚಿತ್ರಕ್ಕಾಗಿ ಆಲಿಯಾ ಭಟ್ ಉತ್ತಮ ನಟಿ ಗೌರವಕ್ಕೆ ಪಾತ್ರರಾದರು.

ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಬಾಲಿವುಡ್‍ನ ಖ್ಯಾತ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಿಂಗ್‍ಖಾನ್ ಶಾರೂಖ್ ಈ ಕಾರ್ಯಕ್ರಮವನ್ನು ನಿರ್ವಹಿಸಿದರು.

ಇನ್ನು, ವಿಮರ್ಶಕರ ಉತ್ತಮ ನಟಿ ಪ್ರಶಸ್ತಿಗೆ ನೀರ್ಜಾ ಚಿತ್ರದ ನಟಿ ಸೋನಂ ಕಪೂರ್ ಪಾತ್ರರಾದರು. ನಟರ ವಿಭಾಗದಲ್ಲಿ ಆಲಿಘರ್ ಮತ್ತು ಉಡ್ತಾ ಪಂಜಾಬ್ ಚಿತ್ರಗಳ ನಟನೆಗಾಗಿ ಶಾಹಿದ್ ಕಪೂರ್ ಮತ್ತು ಮನೋಜ್ ಬಾಜಪೇಯಿ ಪ್ರಶಸ್ತಿ ಪಡೆದರು. ಜೊತೆಗೆ, ನೀರ್ಜಾ ಚಿತ್ರದ ನಿರ್ದೇಶಕ ರಾಮ್ ಮಾದ್ವನಿ ಉತ್ತಮ ಚಿತ್ರ ವಿಭಾಗದಲ್ಲಿ ವಿಮರ್ಶಕರ ಮೆಚ್ಚುಗೆ ಪ್ರಶಸ್ತಿಯನ್ನು ಪಡೆದರು. ಇನ್ನು, ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರದ ಟೈಟಲ್ ಸಾಂಗ್ ಗೆ ಅರ್ಜಿತ್ ಸಿಂಗ್ ಗೆ ಉತ್ತಮ ಗಾಯಕ, ಪ್ರೀತಂಗೆ ಉತ್ತಮ ಸಂಗೀತ ನಿರ್ದೇಶಕ ಮತ್ತು ಉತ್ತಮ ಮ್ಯೂಸಿಕ್ ಆಲ್ಬಂ ಪ್ರಶಸ್ತಿ ಸಿಕ್ಕಿದೆ. ಅಮಿತಾಬ್ ಭಟ್ಟಾಚಾರ್ಯಗೆ ಚಿತ್ರದ ಉತ್ತಮ ಸಂಗೀತ ಸಾಹಿತ್ಯಕ್ಕೆ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ

ಉತ್ತಮ ನಟ : ಅಮೀರ್ ಖಾನ್ (ದಂಗಲ್)

ಉತ್ತಮ ನಟಿ : ಆಲಿಯಾ ಭಟ್ (ಉಡ್ತಾ ಪಂಜಾಬ್)

ಉತ್ತಮ ಚಿತ್ರ : ದಂಗಲ್

ವಿಮರ್ಶಕರ ಮೆಚ್ಚುಗೆ ಗಳಿಸಿದ ಉತ್ತಮ ಚಿತ್ರ : ನೀರ್ಜಾ

ಶ್ರೇಷ್ಟ ನಿರ್ದೇಶಕ: ನಿತೇಶ್ ತಿವಾರಿ (ದಂಗಲ್)

ವಿಮರ್ಶಕರ ಮೆಚ್ಚುಗೆ ಗಳಿಸಿದ ಉತ್ತಮ ನಟರು: ಶಾಹಿದ್ ಕಪೂರ್ (ಉಡ್ತಾ ಪಂಜಾಬ್), ಮನೋಜ್ ಬಾಜಪೇಯಿ (ಆಲಿಘರ್)

ವಿಮರ್ಶಕರ ಮೆಚ್ಚುಗೆ ಗಳಿಸಿದ ಉತ್ತಮ ನಟಿ : ಸೋನಮ್ ಕಪೂರ್ (ನೀರ್ಜಾ)

ಉತ್ತಮ ನಟ(ಕಿರುಚಿತ್ರ) : ಮನೋಜ್ ಬಾಜಪೇಯಿ (ತಾಂಡವ)

ಪ್ರೇಕ್ಷಕರ ಆಯ್ಕೆಯ ಉತ್ತಮ ಕಿರುಚಿತ್ರ: ಕಾಮಕ

ಉತ್ತಮ ಕಿರು ಚಿತ್ರ: ಚಟ್ನಿ

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!