Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಕೊಡವ ಚಿತ್ರ `ತೆಳಂಗ್ ನೀರ್’ ಬಿಡುಗಡೆ

ಕೊಡವ ಚಿತ್ರ `ತೆಳಂಗ್ ನೀರ್’ ಬಿಡುಗಡೆ

ಮಡಿಕೇರಿ : `ಅಲ್ಲಿದೆ ನಮ್ಮನೆ ಇಲ್ಲಿದೆ ಬಂದೆ ಸುಮ್ಮನೆ’ ಖ್ಯಾತಿಯ ನಿರ್ದೇಶಕ ಗೋಪಿ ಪೀಣ್ಯ `ತೆಳಂಗ್ ನೀರ್’ ಎಂಬ ಕೊಡವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಗೋಪಿ ಅವರ ಮೊದಲ ಕೊಡವ ಚಿತ್ರ. ಈ ಚಿತ್ರ ಮಡಿಕೇರಿಯಲ್ಲಿ ಬಿಡುಗಡೆ ಆಗಿದೆ. ಈ ಚಿತ್ರ ಈಗಾಗಲೇ ಅಮೇರಿಕ ಇಂಟರ್ ನ್ಯಾಷನಲ್ ಫಿಲ್ಮ್ ಪೆಸ್ಟಿವಲ್‍ನಲ್ಲಿ 4 ವಿಭಾಗಗಳಲ್ಲಿ ಆಯ್ಕೆಗೊಂಡಿದೆ.

ಕೊಡಗು ಸೈನಿಕರ ತವರು ಎಂದೇ ಖ್ಯಾತಿ. ಹೀಗಾಗಿ, ಸೈನಿಕನ ಜೀವನ ಕತೆಯನ್ನೇ ಇಲ್ಲಿ ಚಿತ್ರವಾಗಿಸಲಾಗಿದೆ. ಕೊಡಗಿನ ಸುಂದರ ಪರಿಸರದಲ್ಲಿ ಸುಮಾರು 40 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ಚಿತ್ರದ ನಾಯಕನಾಗಿ ಶ್ರಿರಾಜ್ ನಟಿಸಿದ್ದರೆ ನಾಯಕಿಯಾಗಿ ಕಟ್ಟೆರ ವಿದ್ಯಾ ಅಯ್ಯಪ್ಪ ಬಣ್ಣ ಹಚ್ಚಿದ್ದಾರೆ. ಇನ್ನು, ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಈಗಾಗಲೇ 2015ರ ಸಾಲಿನ ಕರ್ನಾಟಕ ಪ್ರಾದೇಶಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮಡಿಕೇರಿ ಕಾವೇರಿ ಕಲಾಕ್ಷೇತ್ರದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಒಂದು ವಾರಗಳ ಕಾಲ ಚಿತ್ರ ಇಲ್ಲೇ ಪ್ರದರ್ಶನವಾಗಲಿದೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!