Tuesday , August 14 2018
ಕೇಳ್ರಪ್ಪೋ ಕೇಳಿ
Home / News NOW / ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ಉತ್ಸವ : ಕಣ್ಮನ ಸೆಳೆದ ತೇರುಗಳ ವೈಭವ : ಇಲ್ಲಿದೆ ವೀಡಿಯೋ

ಉಡುಪಿ ಕೃಷ್ಣಮಠದಲ್ಲಿ ಸಂಭ್ರಮದ ಮಕರ ಸಂಕ್ರಾಂತಿ ಉತ್ಸವ : ಕಣ್ಮನ ಸೆಳೆದ ತೇರುಗಳ ವೈಭವ : ಇಲ್ಲಿದೆ ವೀಡಿಯೋ

ಉಡುಪಿ : ಕೃಷ್ಣನೂರು ಉಡುಪಿಯಲ್ಲಿ ಮಕರ ಸಂಕ್ರಾಂತಿಯನ್ನು ವೈಭವದಿಂದಲೇ ಆಚರಿಸಲಾಯಿತು. ಮೂರು ತೇರುಗಳ ರಥೋತ್ಸವ ಇಲ್ಲಿ ಕಣ್ಮನ ಸೆಳೆಯಿತು.

ಏಕಕಾಲದಲ್ಲಿ ಮೂರು ತೇರುಗಳು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಿದವು. ಈ ವಿಹಂಗಮ ನೋಟಕ್ಕೆ ಸಾವಿರಾರು ಜನ ಸಾಕ್ಷಿಯಾದರು.
ಮಕರ ಸಂಕ್ರಾಂತಿಗೂ ಉಡುಪಿ ಕೃಷ್ಣಮಠಕ್ಕೂ ಅವಿನಾಭಾವ ಸಂಬಂಧ. ಎಂಟು ಶತಮಾನಗಳ ಹಿಂದೆ ಮಕರಸಂಕ್ರಾಂತಿಯ ದಿನವೇ ಆಚಾರ್ಯ ಮಧ್ವರು ಕಡಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹೀಗಾಗಿ, ಮಕರ ಸಂಕ್ರಾಂತಿಯಂದು ಮೂರು ತೇರಿನ ಉತ್ಸವ ನಡೆಯುತ್ತದೆ.

ಬ್ರಹ್ಮರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರನ್ನು ಇಟ್ಟು ಮೆರವಣಿಗೆ ಮಾಡಿದರೆ, ಮಹಾಪೂಜಾ ರಥ ಮತ್ತು ಗರುಡ ರಥಗಳಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ಪ್ರದಕ್ಷಿಣೆ ನಡೆಯುತ್ತದೆ.

ಆಕರ್ಷಕ ತೆಪ್ಪೋತ್ಸವ : ಮಧ್ವ ಸರೋವರದಲ್ಲಿ ನಡೆಯುವ ತೆಪೆÇ್ಪೀತ್ಸವ ಈ ಆಚರಣೆಯ ಪ್ರಧಾನ ಆಕರ್ಷಣೆ. ಆಚಾರ್ಯ ಮಧ್ವರ ಮಂದಿರದ ಸುತ್ತಲೂ ಪ್ರದಕ್ಷಿಣಾಕಾರವಾಗಿ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಲಾಗುತ್ತದೆ.
ಅಷ್ಟಮಠಾಧೀಶರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

About sudina

Check Also

ಶಾರ್ಜಾ ಏರ್ ಪೋರ್ಟ್‍ನಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕಿಂಗ್ ಪ್ಲೇಸ್…

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಮಹಿಳೆಯರ ರಕ್ಷಣೆ ಮತ್ತು ಗುಣಮಟ್ಟದ ಸೇವೆ ಒದಗಿಸುವ ಸಲುವಾಗಿ ಶಾರ್ಜಾ …

Leave a Reply

Your email address will not be published. Required fields are marked *

error: Content is protected !!