Monday , January 21 2019
ಕೇಳ್ರಪ್ಪೋ ಕೇಳಿ
Home / Film News / Kollywood / ತಮಿಳರ ಸಿಟ್ಟಿನ ಎಫೆಕ್ಟ್ : ತ್ರಿಶಾ ಟ್ವಿಟರ್ ಖಾತೆ ನಿಷ್ಕ್ರಿಯ

ತಮಿಳರ ಸಿಟ್ಟಿನ ಎಫೆಕ್ಟ್ : ತ್ರಿಶಾ ಟ್ವಿಟರ್ ಖಾತೆ ನಿಷ್ಕ್ರಿಯ

ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ವಿರುದ್ಧವಾಗಿ ಮಾತನಾಡಿದ್ದಾರೆಂದು ತಮಿಳರು ನಟಿ ತ್ರಿಶಾ ವಿರುದ್ಧ ಸಿಟ್ಟಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತ್ರಿಶಾ ವಿರುದ್ಧ ಬಗೆಬಗೆ ಟೀಕೆಗಳು ಕೇಳಿ ಬರುತ್ತಿವೆ. ಮೊನ್ನೆ ತ್ರಿಶಾ ಶೂಟಿಂಗ್ ನಡೆಸುತ್ತಿದ್ದ ಜಾಗಕ್ಕೇ ಹೋಗಿ ಜನ ಪ್ರತಿಭಟನೆ ಮಾಡಿದ್ದರು. ಈ ನಡುವೆ, ನಾನು ಜಲ್ಲಿಕಟ್ಟಿನ ವಿರುದ್ಧವಾಗಿ ಮಾತನಾಡಿಲ್ಲ ಎಂದು ತ್ರಿಶಾ ಟ್ವಿಟರ್‍ನಲ್ಲಿ ಹೇಳಿದ್ದರು. ಆದರೂ ಸಮಾಧಾನಗೊಳ್ಳದ ಜನ ತ್ರಿಶಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಕಾರಣದಿಂದ ನೊಂದಿರುವ ತ್ರಿಶಾ ತಮ್ಮ ಟ್ವಿಟರ್ ಖಾತೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ.

ಇನ್ನು, ತ್ರಿಶಾ ವಿರುದ್ಧ ಜನ ಸಿಟ್ಟಾಗಿರುವುದನ್ನು ಖ್ಯಾತ ನಟ ಕಮಲ್ ಹಾಸನ್ ಖಂಡಿಸಿದ್ದರು.

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!