Saturday , December 15 2018
ಕೇಳ್ರಪ್ಪೋ ಕೇಳಿ
Home / Film News / Bollywood / `ದಂಗಲ್’ ಹುಡುಗಿಗೆ ಮೂಲಭೂತವಾದಿಗಳ ಕಾಟ…? : ತಾನು ಯಾರಿಗೂ ಮಾದರಿ ಅಲ್ಲ : ಟ್ವಿಟರ್‍ನಲ್ಲಿ ಕ್ಷಮೆಯಾಚನೆ…!

`ದಂಗಲ್’ ಹುಡುಗಿಗೆ ಮೂಲಭೂತವಾದಿಗಳ ಕಾಟ…? : ತಾನು ಯಾರಿಗೂ ಮಾದರಿ ಅಲ್ಲ : ಟ್ವಿಟರ್‍ನಲ್ಲಿ ಕ್ಷಮೆಯಾಚನೆ…!

ಮುಂಬೈ : ಅಮೀರ್ ಖಾನ್ ಅಭಿನಯದ `ದಂಗಲ್’ ಚಿತ್ರದಲ್ಲಿ ಮನೋಜ್ಞ ಅಭಿನಯ ಮಾಡಿ ಗಮನ ಸೆಳೆದಿದ್ದ 16 ವರ್ಷದ ಕಾಶ್ಮೀರಿ ಹುಡುಗಿ ಜಹೀರಾ ವಾಸಿಂಗೆ ಮೂಲಭೂತವಾದಿಗಳ ಕಾಟ ಶುರುವಾಗಿದೆ. ಜಹೀರಾ ಚಿತ್ರದಲ್ಲಿ ನಟಿಸಿದ್ದೇ ತಪ್ಪು ಎಂಬ ಟೀಕೆಯ ಮಾತು ಕೇಳಿ ಬಂದಿದೆ. ಇದರಿಂದ ನೊಂದರೋ ಏನೋ ಜಹೀರಾ, ನಾನು ಚಿತ್ರದಲ್ಲಿ ನಟಿಸಿದ್ದಕ್ಕೆ ನನಗೆ ಹೆಮ್ಮೆ ಇಲ್ಲ. ನನ್ನನ್ನು ಯಾರೂ ರೋಲ್ ಮಾಡೆಲ್ ಆಗಿ ಅನುಸರಿಸಬೇಡಿ. ನಾನು ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ ಎಂದು ಜಹೀರಾ ಬರೆದುಕೊಂಡಿದ್ದಾರೆ…!

ದಂಗಲ್ ಚಿತ್ರದಲ್ಲಿ ಜಹೀರಾ ಗೀತಾ ಪೋಗಟ್ ಪಾತ್ರವನ್ನು ನಿರ್ವಹಿಸಿದ್ದರು. ತಮ್ಮ ಅಭಿನಯದ ಮೂಲಕವೇ ಇವರು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದರು. ಕಾಶ್ಮೀರದ ಯುವಜನತೆಗೂ ಇವರು ಮಾದರಿ ಎಂದೇ ಬಿಂಬಿತವಾಗಿದ್ದರು. ಆದರೆ, ಅಷ್ಟಾಗುವಷ್ಟರಲ್ಲಿ ಮೂಲಭೂತವಾದಿಗಳು ಜಹೀರಾ ಸಿನೆಮಾದಲ್ಲಿ ನಟಿಸಿದನ್ನು ಟೀಕಿಸಲು ಶುರು ಮಾಡಿದ್ದರು… ಇದಾದ ಬೆನ್ನಲ್ಲೇ ಜಹೀರಾ ಈ `ಕ್ಷಮಾಪಣೆ’ ಕೇಳಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒತ್ತಡಕ್ಕೆ ಮಣಿದು ಜಹೀರಾ ಈ ಕ್ಷಮೆ ಕೇಳಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬಂದಿದೆ.

ಈ ನಡುವೆ, ಜಹೀರಾ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೊಹಬೂಬ ಮುಫ್ತಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ, ಮೊಹಬೂಬ ಜಹೀರಾಗೆ ಧೈರ್ಯ ತುಂಬಿದ್ದಾರೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!