Saturday , December 15 2018
ಕೇಳ್ರಪ್ಪೋ ಕೇಳಿ
Home / News NOW / ಎಟಿಎಂನಿಂದ ಇನ್ನು ದಿನಕ್ಕೆ 10 ಸಾವಿರ ರೂಪಾಯಿ ಡ್ರಾ ಮಾಡಬಹುದು

ಎಟಿಎಂನಿಂದ ಇನ್ನು ದಿನಕ್ಕೆ 10 ಸಾವಿರ ರೂಪಾಯಿ ಡ್ರಾ ಮಾಡಬಹುದು

ನವದೆಹಲಿ : 500 ಮತ್ತು 1000 ರೂಪಾಯಿ ನೋಟು ಬ್ಯಾನ್ ಬಳಿಕ ಎಟಿಎಂ ಡ್ರಾಗೆ ಮಿತಿ ಹಾಕಲಾಗಿತ್ತು. ಇದೀಗ ಈ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹಿಂದೆ ದಿನವೊಂದಕ್ಕೆ 4500 ರೂಪಾಯಿ ಡ್ರಾ ಮಾಡಬಹುದಾಗಿತ್ತು. ಇದೀಗ ಈ ಮಿತಿಯನ್ನು ಹತ್ತು ಸಾವಿರಕ್ಕೆ ಏರಿಸಲಾಗಿದೆ. ಹೀಗಾಗಿ, ದುಡ್ಡಿನ ತೊಂದರೆ ಅನುಭವಿಸುತ್ತಿದ್ದ ಜನರಿಗೆ ಕೊಂಚ ನೆಮ್ಮದಿ ಸಿಗಲಿದೆ. ಆದರೆ, ವಾರಕ್ಕೆ ಡ್ರಾ ಮಾಡಬಹುದಾದ ಹಣದ ಮಿತಿ ಸದ್ಯಕ್ಕೆ ಹಾಗೆಯೇ ಇದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.

ಇನ್ನು, ಕರೆಂಟ್ ಅಕೌಂಡ್‍ಗೆ ದಿನವೊಂದಕ್ಕೆ ಇದ್ದ ವಿತ್‍ಡ್ರಾ ಮಿತಿಯನ್ನು 50 ರೂಪಾಯಿಯಿಂದ 1 ಲಕ್ಷದ ವರೆಗೆ ಹೆಚ್ಚಳ ಮಾಡಲಾಗಿದೆ. ಈ ನಿಯಮ ಇಂದಿನಿಂದ ಜಾರಿಗೆ ಬರಲಿದೆ.

2016ರ ನವೆಂಬರ್ 8 ರಂದು ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ದೇಶದಲ್ಲಿ ನಗದಿನ ತೊಂದರೆ ಉಂಟಾಗಿತ್ತು. ಇದಾದ ಬಳಿಕ ಎಟಿಎಂಗೆ ಡ್ರಾ ಮಿತಿಯನ್ನು ನಿಗದಿ ಮಾಡಲಾಗಿತ್ತು.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!