Sunday , April 22 2018
Home / News NOW / ಮಂತ್ರಿಮಾಲ್ ಹಿಂಭಾಗದ ಗೋಡೆ ಕುಸಿತ

ಮಂತ್ರಿಮಾಲ್ ಹಿಂಭಾಗದ ಗೋಡೆ ಕುಸಿತ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಹುದೊಡ್ಡ ಮಾಲ್‍ಗಳಲ್ಲಿ ಒಂದಾದ ಮಂತ್ರಿಮಾಲ್‍ನ ಹಿಂಬದಿ ಗೋಡೆ ಕುಸಿದಿದೆ. ಪರಿಣಾಮ, ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಲಕ್ಷ್ಮಮ್ಮ ಸೇರಿ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಬಳಿಕ ಸಿಬ್ಬಂದಿ ಮಾಲ್‍ನಿಂದ ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ. ಜೊತೆಗೆ, ಮಂತ್ರಿಮಾಲ್‍ನಲ್ಲಿ ಸಿನಿಮಾ ಪ್ರದರ್ಶನ ಕೂಡಾ ಸ್ಥಗಿತವಾಗಿದೆ. ಮಳಿಗೆಗಳು ಕೂಡಾ ಬಂದ್ ಆಗಿವೆ.

ಎಸಿ ಪೈಪ್ ತುಂಡಾಗಿ ನೀರು ಸಂಗ್ರಹದಿಂದ ಹಿಂಭಾಗದ ಗೋಡೆ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ. ಒಂದನೇ ಮಹಡಿಯಿಂದ ಮೂರನೇ ಮಹಡಿಯವರೆಗೆ ನೀರು ನಿಂತಿದೆ. ಇನ್ನು, ಸ್ಥಳದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕೆಲ ದಿನಗಳ ಹಿಂದೆ ರಸ್ತೆ ಕಾಮಗಾರಿಗಾಗಿ ಇಲ್ಲಿ ಮಣ್ಣು ಅಗೆಯಲಾಗಿತ್ತು.

About sudina

Check Also

ಸ್ಪೈಸ್ ಜೆಟ್ ತಾಗಿ ರನ್‍ವೇ ಲೈಟ್‍ಗಳಿಗೆ ಹಾನಿ : ಒಂದೂವರೆ ಗಂಟೆ ಏರ್ ಪೋರ್ಟ್ ಬಂದ್…

ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ದುರ್ಘಟನೆಯೊಂದು ಸಂಭವಿಸಿದೆ. ಹೈದರಾಬಾದ್‍ನಿಂದ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನ …

Leave a Reply

Your email address will not be published. Required fields are marked *

error: Content is protected !!