Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Kollywood / ತಮಿಳುನಾಡು ತಮಿಳರಿಗೆ ಸ್ವಂತ : ರಜನಿಕಾಂತ್ ರಾಜಕೀಯಕ್ಕೆ ಬಂದರೆ ನಾನು ಮೊದಲು ವಿರೋಧಿಸುತ್ತೇನೆ : ನಟ ಶರತ್ ಕುಮಾರ್ ಟೀಕೆ

ತಮಿಳುನಾಡು ತಮಿಳರಿಗೆ ಸ್ವಂತ : ರಜನಿಕಾಂತ್ ರಾಜಕೀಯಕ್ಕೆ ಬಂದರೆ ನಾನು ಮೊದಲು ವಿರೋಧಿಸುತ್ತೇನೆ : ನಟ ಶರತ್ ಕುಮಾರ್ ಟೀಕೆ

ಚೆನ್ನೈ : ತಮಿಳು ನಟ ಶರತ್ ಕುಮಾರ್ ಸೂಪರ್‍ಸ್ಟಾರ್ ರಜನಿಕಾಂತ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ತಮಿಳುನಾಡು ತಮಿಳರಿಗಷ್ಟೇ ಸ್ವಂತ. ಬೇರೆ ಯಾರೂ ಇಲ್ಲಿ ಆಳುವಂತಿಲ್ಲ. ಒಂದೊಮ್ಮೆ ರಜನಿಕಾಂತ್ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಬಂದರೆ ಮೊದಲು ವಿರೋಧಿಸುವವನು ನಾನು ಎಂದು ಶರತ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ರಜನಿ ಎಷ್ಟಾದರೂ ಹೊರಗಿನವರು ಎಂಬುದನ್ನು ಶರತ್ ಸೂಚ್ಯವಾಗಿ ಹೇಳೀದ್ದಾರೆ.

ಇಷ್ಟಕ್ಕೂ ಶರತ್ ಹೀಗೆ ಹೇಳಲು ಕಾರಣ ರಜನಿಕಾಂತ್ ನೀಡಿರುವ ಒಂದು ಹೇಳಿಕೆ. ತುಘಲಕ್ ಪತ್ರಿಕೆಯ 47ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ರಜನಿಕಾಂತ್, ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ನೋಡುವಾಗ ಪತ್ರಿಕೆಯ ಸಂಸ್ಥಾಪಕ ದಿವಂಗತ ಚೋ ರಾಮಸ್ವಾಮಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಇದು ಶರತ್‍ರನ್ನು ಕೆರಳಿಸಿದೆ. ತಮಿಳುನಾಡಿನಲ್ಲಿ ಅಂತಹ ರಾಜಕೀಯ ಬಿಕ್ಕಟ್ಟು ಏನು ಇದೆ. ಹೀಗೆ ಸುಮ್ಮನೆ ಯಾರ್ಯಾರೋ ಹೇಳಿಕೆ ನೀಡಬಾರದು ಎಂದು ಶರತ್ ಖಾರವಾಗಿಯೇ ಮಾತನಾಡಿದ್ದಾರೆ. ರಜನಿಕಾಂತ್ ಹೊರಗಿನವರು. ಹೀಗಾಗಿ, ಇಂತಹ ಹೇಳಿಕೆಗಳನ್ನು ನೀಡುವಾಗ ತುಂಬಾ ಜಾಗರೂಕರಾಗಿರಬೇಕು ಅವರು ಎಂದು ಶರತ್ ಕಿವಿಮಾತು ಹೇಳಿದ್ದಾರೆ.

ಶರತ್ ಹೇಳಿದ್ದು : ರಜನಿಕಾಂತ್ ನನಗೆ ಒಳ್ಳೆಯ ಸ್ನೇಹಿತ. ಒಳ್ಳೆಯ ಮನುಷ್ಯ ಕೂಡಾ. ಅವರು ದೊಡ್ಡ ಸ್ಟಾರ್. ಆದರೆ, ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ ಅದನ್ನು ಮೊದಲು ವಿರೋಧಿಸುವ ವ್ಯಕ್ತಿ ನಾನು. ನಾನು ಮಲಯಾಳಂ ಮತ್ತು ಕನ್ನಡದಲ್ಲಿ ಸೂಪರ್‍ಹಿಟ್ ಚಿತ್ರಗಳಲ್ಲಿ ನಟಿಸಿದ್ದೇನೆ. ಹಾಗಂತ ನಾನು ಹೋಗಿ ಕರ್ನಾಟಕ ಅಥವಾ ಕೇರಳದಲ್ಲಿ ನಿಂತು ಶಾಸಕನಾಗಲು ಸಾಧ್ಯನಾ…? ಯಾರು ಬೇಕಾದರೂ ಎಲ್ಲಿ ಬೇಕಾದರು ಬದುಕಬಹುದು, ಉದ್ಯಮ ಮಾಡಬಹುದು. ಅದು ಬೇರೆ. ಆದರೆ, ತಮಿಳುನಾಡಿನ ಆಳ್ವಿಕೆ ಮಾತ್ರ ಅದು ತಮಿಳರಿಗೆ ಮಾತ್ರ ಸ್ವಂತ. ಇದರಲ್ಲಿ ಸಂದೇಹವೇ ಬೇಡ. ಹೊರಗಿನವರು ಬಂದು ನಮ್ಮ ರಾಜ್ಯವನ್ನು ಆಳುತ್ತಾರೆಂದರೆ ಅದನ್ನು ಸುಮ್ಮನೆ ನೋಡಲು ಸಾಧ್ಯವಿಲ್ಲ. ಇಲ್ಲಿ ರಜನಿಕಾಂತ್ ಹೇಳಿಕೆಯನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಬೇಕಾಗಿಲ್ಲ. ರಜನಿಕಾಂತ್ ತಮಿಳುನಾಡಿನಲ್ಲಿ ಇರುವಾಗ ತಮಿಳರಿಗೆ ಬೇಕಾದಂತೆ ಮಾತನಾಡುತ್ತಾರೆ. ಕರ್ನಾಟಕಕ್ಕೆ ಹೋದಾಗ ಅಲ್ಲಿಗೆ ಬೇಕಾದಂತೆ ಮಾತನಾಡುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುವವರು ಅವರು. ಆದರೆ, ತಮಿಳುನಾಡಿನ ರಾಜಕೀಯದ ಬಗ್ಗೆ ಮಾತನಾಡುವಾಗ ಯಾರಲ್ಲೂ ಇಂತಹ ಧೋರಣೆ ಇರಬಾರದು. ತಮಿಳು ಸಂಸ್ಕøತಿ, ತಮಿಳು ಮನಸ್ಥಿತಿ ಮತ್ತು ತಮಿಳಿಗಾಗಿ ಕೆಲಸ ಮಾಡುವವರಷ್ಟೇ ಇಲ್ಲಿನ ರಾಜಕೀಯದ ಬಗ್ಗೆ ಮಾತನಾಡಲು ಅರ್ಹರು.

ಹೀಗಂತ ಶರತ್ ಹೇಳಿದ್ದಾರೆ. ಈ ಮೂಲಕ ಕರ್ನಾಟಕ, ತಮಿಳುನಾಡು ಎಂಬ ಭಾಷಾ ಗಲಾಟೆಗೆ ಶರತ್ ಮತ್ತಷ್ಟು ತುಪ್ಪ ಸುರಿಯುತ್ತಿದ್ದಾರೆ. ಇನ್ನು, ರಜನಿಕಾಂತ್‍ರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಹಲವು ವರ್ಷದಿಂದ ನಡೆಯುತ್ತಿದೆ. ಆದರೆ, ಪ್ರಾದೇಶಿಕ ಪಕ್ಷಗಳು ಯಾವತ್ತೂ ರಜನಿ ರಾಜಕೀಯ ಪ್ರವೇಶವನ್ನು ವಿರೋಧಿಸುತ್ತಲೇ ಬಂದಿದ್ದವು. ಇನ್ನು, ರಜನಿಕಾಂತ್ ಕೂಡಾ ದಶಕಗಳಿಂದ ರಾಜಕೀಯದಿಂದ ದೂರವೇ ಇದ್ದು, ಇವು ಯಾವುದಕ್ಕೂ ತಲೆ ಕೆಡಿಸಿಯೇ ಕೊಂಡಿಲ್ಲ.

ಇವರು ಇದ್ದದ್ದೂ ಕರ್ನಾಟಕದಲ್ಲೇ…! : ಇಷ್ಟಕ್ಕೂ ಶರತ್ ಕುಮಾರ್ ಕೂಡಾ ಆರಂಭದಲ್ಲಿ ಇದ್ದದ್ದು ಇದೇ ಬೆಂಗಳೂರಿನಲ್ಲಿ. 1973ರಲ್ಲಿ ಬೆಂಗಳೂರಿಗೆ ಬಂದ ಶರತ್ ಕುಮಾರ್ ಮತ್ತೆ ಮರಳಿದ್ದು 1983ರಲ್ಲಿ. ಬಿಎಸ್‍ಸಿ ಪದವಿಧರರಾಗಿದ್ದ ಶರತ್ ಕುಮಾರ್ ಬೆಂಗಳೂರಿನಲ್ಲೇ ಕೆಲಸ ಆರಂಭಿಸಿದ್ದು. ಮೊದಲು ಬೆಂಗಳೂರಿನಿಂದ ರಿಪೋರ್ಟರ್ ಆಗಿದ್ದರು. ಬಳಿಕ ಪತ್ರಿಕೆಯ ಮಾರ್ಕೇಟಿಂಗ್ ಮತ್ತು ಸಕ್ಯೂಲೇಷನ್ ಸೆಕ್ಷನ್‍ನಲ್ಲೂ ಕೆಲಸ ಮಾಡಿದ್ದರು. ಮದರಾಸ್‍ನಿಂದ ಮೊದಲು ಬಂದ ಪೇಪರನ್ನು ಕಂಟೋನ್‍ಮೆಂಟ್ ರೈಲ್ವೇ ನಿಲ್ದಾಣಕ್ಕೆ ಸೈಕಲ್‍ನಲ್ಲಿ ಹೋಗಿ ತೆಗೆದುಕೊಂಡು ಬರುತ್ತಿದ್ದರು. ಬಳಿಕ ಆ ಪತ್ರಿಕೆಗಳನ್ನು ಅಂಗಡಿಗಳಿಗೆ ಮನೆಗಳಿಗೆ ಇವರು ಹಾಕುತ್ತಿದ್ದರು. ಇದಾದ ಬಳಿಕ ಇವರು ಚಿತ್ರರಂಗಕ್ಕೆ ಪ್ರವೇಶಿಸಿದರು. ಕನ್ನಡದ ಹಲವು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

video courtesy: nakkheeranwebtv

About sudina

Check Also

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ …

Leave a Reply

Your email address will not be published. Required fields are marked *

error: Content is protected !!