Thursday , November 15 2018
ಕೇಳ್ರಪ್ಪೋ ಕೇಳಿ
Home / Sandalwood / ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಎರಡು ಆಟೋ ಗಿಫ್ಟ್

ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಎರಡು ಆಟೋ ಗಿಫ್ಟ್

ಬೆಂಗಳೂರು : ಸ್ಯಾಂಡಲ್‍ವುಡ್ ನಟ ದುನಿಯಾ ವಿಜಿ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ತುಂಬಾ ಸ್ಮರಣೀಯವನ್ನಾಗಿಸಲು ಹೊರಟಿದ್ದಾರೆ. ಜನವರಿ 20ಕ್ಕೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವಿಜಿ, ಇಬ್ಬರು ಆಟೋ ಡ್ರೈವರ್‍ಗಳಿಗೆ ಆಟೋವನ್ನು ಗಿಫ್ಟ್ ಆಗಿ ನೀಡಲಿದ್ದಾರೆ. ಇದಕ್ಕಾಗಿ ಅರ್ಹ ಇಬ್ಬರು ಆಟೋ ಡ್ರೈವರ್‍ಗಳನ್ನು ವಿಜಿ ಅವರೇ ಗುರುತಿಸಿದ್ದು, ಇವರ ಹೆಸರಲ್ಲಿ ಆಟೋವನ್ನು ಬುಕ್ ಕೂಡಾ ಮಾಡಲಾಗಿದೆ. ಇದರಲ್ಲಿ ಒಬ್ಬರು ವಿಕಲಚೇತನರಾದರೆ, ಇನ್ನೊಬ್ಬರು ಅನಾಥರು. ಸದ್ಯ ಇವರಿಬ್ಬರೂ ಬಾಡಿಗೆ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ಈ ಬಾರಿ ವಿಜಿ ಆಟೋ ಕೊಡುವುದಕ್ಕೂ ಒಂದು ಕಾರಣವಿದೆ. ಅದೇನೆಂದರೆ ಆರ್. ಚಂದ್ರು ನಿರ್ದೇಶನದಲ್ಲಿ `ಕನಕ’ ಎಂಬ ಚಿತ್ರದಲ್ಲಿ ವಿಜಯ್ ಆಟೋ ಡ್ರೈವರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ, ಇತ್ತೀಚೆಗೆ ದುರಂತ ಅಂತ್ಯ ಕಂಡ ತಮ್ಮ ಸ್ನೇಹಿತರಾದ ಅನಿಲ್ ಮತ್ತು ಉದಯ್ ಸ್ಮರಣಾರ್ಥವಾಗಿಯೂ ವಿಜಿ ಈ ಆಟೋವನ್ನು ನೀಡುತ್ತಿದ್ದಾರೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!