Monday , August 20 2018
ಕೇಳ್ರಪ್ಪೋ ಕೇಳಿ
Home / News NOW / ನೈಜೀರಿಯಾ ವಾಯುಪಡೆಯ ದೊಡ್ಡ ಎಡವಟ್ಟು : ತನ್ನದೇ ನಿರಾಶ್ರಿತರ ಶಿಬಿರದ ಮೇಲೆ ದಾಳಿ : 100ಕ್ಕೂ ಹೆಚ್ಚು ಬಲಿ

ನೈಜೀರಿಯಾ ವಾಯುಪಡೆಯ ದೊಡ್ಡ ಎಡವಟ್ಟು : ತನ್ನದೇ ನಿರಾಶ್ರಿತರ ಶಿಬಿರದ ಮೇಲೆ ದಾಳಿ : 100ಕ್ಕೂ ಹೆಚ್ಚು ಬಲಿ

ಮೈದುಗುರಿ (ನೈಜೀರಿಯಾ) : ಬೋಕೋ ಹರಾಮ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ನೈಜೀರಿಯಾ ವಾಯುಪಡೆ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಉಗ್ರರ ಕ್ಯಾಂಪ್ ಎಂದು ತಿಳಿದು ತನ್ನದೇ ನಿರಾಶ್ರಿತರ ಶಿಬಿರದ ಮೇಲೆ ನೈಜೀರಿಯಾದ ವಾಯುಪಡೆಯ ಜೆಟ್ ಬಾಂಬ್ ದಾಳಿ ಮಾಡಿದೆ. ಪರಿಣಾಮ, ನೂರಕ್ಕೂ ಅಧಿಕ ನಿರಾಶ್ರಿತರು ಅಸುನೀಗಿದ್ದಾರೆ. ಇನ್ನು, ಈ ಘಟನೆಯಲ್ಲಿ ರೆಡ್‍ಕ್ರಾಸ್ ಸಂಸ್ಥೆಯ 20ಕ್ಕೂ ಹೆಚ್ಚು ಸ್ವಯಂಸೇವಕರು ಕೂಡಾ ಕೊನೆಯುಸಿರೆಳೆದಿದ್ದಾರೆ.

ನೈಜೀರಿಯಾದ ಜನರ ಸಂಪರ್ಕವೇ ಇಲ್ಲದಂತೆ ದೂರ ಎಲ್ಲೋ ಬದುಕುತ್ತಿದ್ದ ಈ ಜನರನ್ನು ಹೆಲಿಕಾಪ್ಟರ್‍ನ ಸಹಾಯದಿಂದ ರಕ್ಷಿಸಿ ಇಲ್ಲಿ ಆಶ್ರಯ ನೀಡಲಾಗಿತ್ತು. ಇವರ ಮೇಲೆ ವಾಯುಪಡೆ ದಾಳಿ ಮಾಡಿದೆ. ನೈಜೀರಿಯಾದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಲ್ಲಿನ ವಾಯುಪಡೆ ಇಂತಹದ್ದೊಂದು ದೊಡ್ಡ ಪ್ರಮಾದವನ್ನೆಸಗಿದೆ.

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!