Monday , July 23 2018
ಕೇಳ್ರಪ್ಪೋ ಕೇಳಿ
Home / Sandalwood / ಉಡುಪಿ ಕಾಪು ಬೀಚ್‍ನಲ್ಲಿ `ಟಗರು’ ಚಿತ್ರದ ಶೂಟಿಂಗ್

ಉಡುಪಿ ಕಾಪು ಬೀಚ್‍ನಲ್ಲಿ `ಟಗರು’ ಚಿತ್ರದ ಶೂಟಿಂಗ್

ಉಡುಪಿ : ಶಿವರಾಜ್‍ಕುಮಾರ್ ಅಭಿನಯದ ಸೂರಿ ನಿರ್ದೇಶನದ `ಟಗರು’ ಚಿತ್ರದ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಸದ್ಯ ಉಡುಪಿಯ ಕಾಪು ಬೀಚ್‍ನಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ. ಶಿವಣ್ಣನಿಗೆ ಇಲ್ಲಿ ಮಾನ್ವಿತಾ ಹರೀಶ್ ನಾಯಕಿ ಆಗಿದ್ದಾರೆ. ತುಂಬಾ ಆಸಕ್ತಿದಾಯಕ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ.

ಈ ಚಿತ್ರದಲ್ಲಿ ಶಿವರಾಜ್‍ಕುಮಾರ್, ಮಾನ್ವಿತಾ ಹರೀಶ್, ಧನಂಜಯ್, ವಶಿಷ್ಠ ಸಿಂಹ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಭಾವನಾ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದು, ಫೆಬ್ರವರಿಯಿಂದ ಭಾವನಾ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ. ಕೆ ಪಿ ಶ್ರೀಕಾಂತ್ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಇನ್ನು, ಜನ ಶೂಟಿಂಗನ್ನು ಬಹಳ ಆಸಕ್ತಿಯಿಂದ ನೋಡುತ್ತಿದ್ದಾರೆ. ಶಿವರಾಜ್‍ಕುಮಾರ್ ಅವರನ್ನು ನೋಡಲು ಪುಟಾಣಿಗಳು ಮುಗಿಬೀಳುತ್ತಿದ್ದಾರೆ. ಈ ಪುಟಾಣಿಗಳೊಂದಿಗೆ ಶಿವಣ್ಣ ಕೂಡಾ ತುಂಬಾ ಖುಷಿಯಿಂದಲೇ ಕಾಲ ಕಳೆದಿದ್ದಾರೆ. ಶಾಲಾ ಮಕ್ಕಳೊಂದಿಗೆ ಶಿವಣ್ಣ ಫೋಟೋಗೂ ಪೋಸ್ ಕೊಟ್ಟಿದ್ದಾರೆ.

ಫೋಟೋ ಕೃಪೆ : ಟಗರು ಚಿತ್ರತಂಡ/ಫೇಸ್‍ಬುಕ್

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!