Thursday , July 19 2018
ಕೇಳ್ರಪ್ಪೋ ಕೇಳಿ
Home / Film News / Bollywood / ಸಲ್ಮಾನ್ ಖಾನ್‍ಗೆ ತುಂಬಾ ನೊಂದು ಪತ್ರ ಬರೆದ ಅಜಯ್ ದೇವಗನ್

ಸಲ್ಮಾನ್ ಖಾನ್‍ಗೆ ತುಂಬಾ ನೊಂದು ಪತ್ರ ಬರೆದ ಅಜಯ್ ದೇವಗನ್

ಮುಂಬೈ : ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಜೊತೆಯಾಗಿ ಅಕ್ಷಯ್‍ಕುಮಾರ್ ಇರುವ ಚಿತ್ರವನ್ನು ನಿರ್ಮಿಸುವ ಸುದ್ದಿ ಹಳೆಯದ್ದು. (Read Also : ದೇವಗನ್ ವಿರುದ್ಧದ ಸೇಡು ತೀರಿಸಿದರಾ ಕರಣ್ ಜೋಹರ್…?) ನಟ ಅಜಯ್ ದೇವಗನ್ ವಿರುದ್ಧ ಸೇಡು ತೀರಿಸುವುದಕ್ಕೆಯೇ ಕರಣ್ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಎಂಬುದು ಸುದ್ದಿ.

ಯಾಕೆಂದರೆ, ಅಜಯ್ ದೇವಗನ್ ಈಗಾಗಲೇ ಶುರು ಮಾಡಿರುವ `ಸನ್ ಆಫ್ ಸರ್ದಾರ್ : ಬ್ಯಾಟಲ್ ಆಫ್ ಸರ್ಗಾರಿ’ ಚಿತ್ರದ ಕತೆಯೂ ಈಗ ಕರಣ್ ಜೋಹರ್ ಮತ್ತು ಸಲ್ಮಾನ್ ಖಾನ್ ನಿರ್ಮಿಸಬೇಕೆಂದಿರುವ ಕತೆಯ ಮೂಲ ಒಂದೇ ಅಂತೆ. 1897ದ ವೀರ ಸೈನಿಕ ಹವಿಲ್ದಾರ್ ಇಶಾರ್ ಸಿಂಗ್ ಅವರ ಜೀವನಕತೆಯನ್ನು ಆಧರಿಸಿದ ಚಿತ್ರಗಳು ಇವಂತೆ.

ಸಲ್ಮಾನ್ ಖಾನ್ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿರುವ ಸುದ್ದಿ ಕೇಳಿ ಅಜಯ್ ಶಾಕ್ ಆದರಂತೆ. ಯಾಕೆಂದರೆ, ಇದೇ ಕತೆಯ ಮೇಲೆ ಅಜಯ್ ಮತ್ತು ಅವರ ತಂಡ ಎರಡು ವರ್ಷದಿಂದ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಇದೇ ಕತೆಯಿರುವ ಇನ್ನೊಂದು ಚಿತ್ರ ಬಂದರೆ ಅಜಯ್‍ಗೆ ನೋವಾಗುವುದಿಲ್ವಾ? ಇದರಿಂದ ನೊಂದ ಅಜಯ್ ದೇವಗನ್ ಸುಲ್ತಾನ್ ಸಲ್ಮಾನ್‍ಗೆ ಪತ್ರ ಬರೆದಿದ್ದಾರಂತೆ. `ನಿಮ್ಮಿಂತ ನಾನು ಇಂತಹ ನಡೆಯನ್ನು ನಿರೀಕ್ಷಿಸಿರಲಿಲ್ಲ. ನೀವು ನನಗೆ ತುಂಬಾ ನೋವು ಕೊಟ್ಟಿದ್ದೀರಿ’ ಎಂದು ಅಜಯ್ ಹೇಳಿದ್ದಾರಂತೆ. ಜೊತೆಗೆ, ಸಾಧ್ಯವಾದರೆ ಈ ಕತೆಯನ್ನು ಚಿತ್ರ ಮಾಡದಂತೆಯೂ ಇವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರಂತೆ.

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!