Sunday , September 23 2018
ಕೇಳ್ರಪ್ಪೋ ಕೇಳಿ
Home / Sudina Special / ನಕ್ಸಲ್ ಪೀಡಿತ ಪ್ರದೇಶಕ್ಕೆ ಸಿಆರ್‍ಪಿಎಫ್‍ನ ಮೊದಲ ಮಹಿಳಾ ಆಫೀಸರ್ ನೇಮಕ : ಇಲ್ಲಿದೆ ಧೀರೆ ಉಷಾ ಕಿರಣ್ ಕತೆ

ನಕ್ಸಲ್ ಪೀಡಿತ ಪ್ರದೇಶಕ್ಕೆ ಸಿಆರ್‍ಪಿಎಫ್‍ನ ಮೊದಲ ಮಹಿಳಾ ಆಫೀಸರ್ ನೇಮಕ : ಇಲ್ಲಿದೆ ಧೀರೆ ಉಷಾ ಕಿರಣ್ ಕತೆ

ಬಸ್ತಾರ್ : ಛತ್ತೀಸ್‍ಗಡ ನಕ್ಸಲ್ ಪೀಡಿತ ಪ್ರದೇಶ. ನಕ್ಸಲರು ಇಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದಿದೆ. ಇಂತಹ ಪ್ರದೇಶಕ್ಕೆ ಸಿಆರ್‍ಪಿಎಫ್ ಮೊದಲ ಮಹಿಳಾ ಅಧಿಕಾರಿಯನ್ನು ನೇಮಿಸಿದೆ. ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಉಷಾ ಕಿರಣ್ ಎಂಬ ಧೀರ ವನಿತೆ ಕಾರ್ಯನಿರ್ವಹಿಸಲಿದ್ದಾರೆ. ಇದು ಮಹಿಳೆಯರಿಗೆ ನಿಜಕ್ಕೂ ಒಂದು ಮಾದರಿ ಮತ್ತು ಸ್ಫೂರ್ತಿದಾಯಕ ನಡೆ ಆಗಿದೆ.

27 ವರ್ಷದ ಉಷಾ ಕಿರಣ್ ಇಲ್ಲಿ ತನ್ನ ಎಕೆ 47 ರೈಫಲ್‍ನಿಂದ ಬುಡಕಟ್ಟು ಸಮುದಾಯದ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಸದ್ಯ ಉಷಾ ಕಿರಣ್ ಬಸ್ತಾರ್‍ನ ಅತ್ಯಂತ ಕಠಿಣ ಅರಣ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ನೆನಪಿಗೆ, ಇದೇ ಪ್ರದೇಶದಲ್ಲಿ 2013ರಲ್ಲಿ ಕಾಂಗ್ರೆಸ್ ನಾಯಕನ ಮೇಲೆ ನಕ್ಸಲರು ದಾಳಿ ಮಾಡಿದ್ದರು ಮತ್ತು ಈ ಪರಿಸ್ಥಿತಿ ನಿಯಂತ್ರಿಸಲು 4 ಗಂಟೆಗಳ ಕಾರ್ಯಾಚರಣೆ ನಡೆಸಬೇಕಾಗಿತ್ತು. ಈ ದಾಳಿ ವೇಳೆ 35 ಜನ ಪ್ರಾಣ ತೆತ್ತಿದ್ದರು.

ಒಂದು ಮೂಲಗಳ ಪ್ರಕಾರ ಇದೇ ಅತ್ಯಂತ ಸ್ಮೂಕ್ಷ ಪ್ರದೇಶದಲ್ಲಿ ಕೆಲಸ ಮಾಡುವ ಬಯಕೆ ಉಷಾ ಕಿರಣ್ ಅವರದ್ದಾಗಿತ್ತು. ಇಲ್ಲಿ ಉಷಾ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆಯರಿಗೆ ಶಿಕ್ಷಣ ಮತ್ತು ಭದ್ರತಾ ಪಡೆಗೆ ಸೇರುವಂತೆ ಪ್ರೋತ್ಸಾಹಿಸುವ ಬಯಕೆಯನ್ನು ಹೊಂದಿದ್ದಾರೆ.

ಭದ್ರತಾ ಪಡೆಯ ಪರಿಚಯ ಉಷಾಗೆ ಹೊಸತಲ್ಲ. ಇವರ ಕುಟುಂಬವೆಲ್ಲಾ ಭದ್ರತಾ ಪಡೆಯಲಿತ್ತು. ಇವರ ತಾತ ನಿವೃತ್ತರಾಗಿದ್ದು, ಇವರ ತಂದೆ ಇನ್ನೂ ಸೇವೆಯಲ್ಲಿದ್ದಾರೆ. ಉಷಾ ಭದ್ರತಾ ಪಡೆಗೆ ಸೇರಿರುವ ಈ ಕುಟುಂಬದ ಮೂರನೇ ತಲೆಮಾರಿನವರು.

About sudina

Check Also

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ …

Leave a Reply

Your email address will not be published. Required fields are marked *

error: Content is protected !!