Sunday , February 17 2019
ಕೇಳ್ರಪ್ಪೋ ಕೇಳಿ
Home / News NOW / ಏನಾದರೂ ಬುದ್ಧಿ ಕಲಿಯದ ಅಮೆಜಾನ್ : ಭಾರತದ ಧ್ವಜ, ಗಾಂಧೀಜಿ ಬಳಿಕ ಈಗ ಸ್ಕೇಟ್‍ಬೋರ್ಡ್‍ನಲ್ಲಿ ಗಣೇಶ…!

ಏನಾದರೂ ಬುದ್ಧಿ ಕಲಿಯದ ಅಮೆಜಾನ್ : ಭಾರತದ ಧ್ವಜ, ಗಾಂಧೀಜಿ ಬಳಿಕ ಈಗ ಸ್ಕೇಟ್‍ಬೋರ್ಡ್‍ನಲ್ಲಿ ಗಣೇಶ…!

ಚಂಡೀಗಢ : ಆನ್‍ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಇನ್ನೂ ಬುದ್ಧಿ ಕಲಿತಿಲ್ಲ. ಮೊನ್ನೆ ಡೋರ್‍ಮ್ಯಾಟ್‍ನಲ್ಲಿ ತ್ರಿವರ್ಣ ಧ್ವಜವನ್ನು ಮುದ್ರಿಸಿರುವ ವಸ್ತು ಮಾರಾಟ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಇದೇ ಸಂಸ್ಥೆ ಬಳಿಕ ಗಾಂಧೀಜಿ ಚಿತ್ರವಿರುವ ಚಪ್ಪಲಿಯನ್ನು ಮಾರಿ ಮತ್ತೆ ಆಕ್ರೋಶಕ್ಕೆ ಕಾರಣವಾಗಿತ್ತು. ಇಷ್ಟಾದರೂ ಈ ಸಂಸ್ಥೆ ಇನ್ನೂ ಬುದ್ಧಿ ಕಲಿತಿಲ್ಲ. ಈಗ ಗಣೇಶನನ್ನು ಮುದ್ರಿಸಿರುವ ಸ್ಕೇಟ್‍ಬೋರ್ಡ್ ಮಾರಾಟ ಶುರು ಮಾಡಿದೆ ಇದೇ ಅಮೆಜಾನ್.

ಚಂಢೀಗಡ ಮೂಲದ ವಕೀಲ ಅಜಯ್ ಜಗ್ಗಾ ಎಂಬುವವರು ಈ ಬಗ್ಗೆ ಕೇಂದ್ರ ಗೃಹಸಚಿವ ರಾಜ್‍ನಾಥ್‍ಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಈ ವಸ್ತುವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ, ಕ್ಷಮೆ ಯಾಚಿಸುವುದಕ್ಕೂ ಆಗ್ರಹಿಸಿದ್ದಾರೆ.

(ಫೋಟೋ ಇದೆ. ಆದರೆ, ಬಳಸಿಕೊಂಡಿಲ್ಲ)

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!