Monday , January 22 2018
Home / News NOW / ಶಾಲಾ ಬಸ್‍ಗೆ ಟ್ರಕ್ ಡಿಕ್ಕಿ : 15ಕ್ಕೂ ಹೆಚ್ಚು ಮಕ್ಕಳು ಸಾವು : ಸಾವಿನ ಸಂಖ್ಯೆ ಏರುವ ಭೀತಿ
Buy Bitcoin at CEX.IO

ಶಾಲಾ ಬಸ್‍ಗೆ ಟ್ರಕ್ ಡಿಕ್ಕಿ : 15ಕ್ಕೂ ಹೆಚ್ಚು ಮಕ್ಕಳು ಸಾವು : ಸಾವಿನ ಸಂಖ್ಯೆ ಏರುವ ಭೀತಿ

ಎತಾಹ್ : ಉತ್ತರ ಪ್ರದೇಶದ ಎತಾಹ್‍ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶಾಲಾ ಬಸ್‍ಗೆ ಟ್ರಕ್ ಡಿಕ್ಕಿಯಾದ ಪರಿಣಾಮ 15ಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿ 30ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಎತಾಹ್ ಪ್ರದೇಶದ ಅಲಿಗಂಜ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವಿನ ಸಂಖ್ಯೆ ಇನ್ನೂ ಅಧಿಕವಾಗುವ ಅಪಾಯವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲಿಗಂಜ್‍ನ ಜೆಎಸ್ ವಿದ್ಯಾ ಪಬ್ಲಿಕ್ ಸ್ಕೂಲ್‍ನ ಮಕ್ಕಳು ಈ ಬಸ್‍ನಲ್ಲಿ ಇದ್ದರು. ಎಲ್‍ಕೆಜಿ ಯಿಂದ ಏಳು ಎಂಟನೆ ತರಗತಿ ವರೆಗಿನ ಮಕ್ಕಳೂ ಈ ಬಸ್‍ನಲ್ಲಿದ್ದರು ಎಂಬ ಪ್ರಾಥಮಿಕ ಮಾಹಿತಿಯೂ ಸಿಕ್ಕಿದೆ.

ರಜೆ ನೀಡಿರಲಿಲ್ಲ : ಉತ್ತರ ಪ್ರದೇಶದ ತುಂಬಾ ದಟ್ಟ ಮಂಜು ಆವರಿಸಿದ ಪರಿಸ್ಥಿತಿ ಇದೆ. ಹೀಗಾಗಿ, ಎಲ್ಲಾ ಶಾಲೆಗಳಿಗೆ ರಜೆ ನೀಡಲು ಸೂಚನೆ ನೀಡಲಾಗಿತ್ತು. ಆದರೆ, ಈ ಸೂಚನೆಯನ್ನು ಧಿಕ್ಕಸಿ ಜೆಎಸ್ ವಿದ್ಯಾ ಪಬ್ಲಿಕ್ ಶಾಲೆ ರಜೆ ನೀಡಿರಲಿಲ್ಲ.

CEX.IO Bitcoin Exchange

About sudina

Check Also

ಜಾನುವಾರು ಕಳ್ಳರಿಂದ ಬಿಎಸ್​ಎಫ್​ ಅಧಿಕಾರಿಗೆ ಥಳಿತ, ಸ್ಥಿತಿ ಗಂಭೀರ

ತ್ರಿಪುರ : ಭಾರತ ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳರು ಬಿಎಸ್​ಎಫ್​​ ಅಧಿಕಾರಿ ಮೇಲೆ ದಾಳಿ ಮಾಡಿದ್ದಾರೆ. ಇವತ್ತು ಮುಂಜಾನೆ 2 …

Leave a Reply

Your email address will not be published. Required fields are marked *

error: Content is protected !!