Monday , September 24 2018
ಕೇಳ್ರಪ್ಪೋ ಕೇಳಿ
Home / Sandalwood / ಉಡುಪಿ ಕೃಷ್ಣಮಠಕ್ಕೆ ಶಿವರಾಜ್‍ಕುಮಾರ್ ಭೇಟಿ : ಪೂಜೆ : ಇಲ್ಲಿದೆ ವೀಡಿಯೋ

ಉಡುಪಿ ಕೃಷ್ಣಮಠಕ್ಕೆ ಶಿವರಾಜ್‍ಕುಮಾರ್ ಭೇಟಿ : ಪೂಜೆ : ಇಲ್ಲಿದೆ ವೀಡಿಯೋ

ಉಡುಪಿ : ಟಗರು ಚಿತ್ರದ ಶೂಟಿಂಗ್‍ಗಾಗಿ ಕರಾವಳಿಗೆ ಬಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಿವಣ್ಣ ಜೊತೆ ಪತ್ನಿ ಗೀತಾ ಕೂಡಾ ಜೊತೆಗಿದ್ದರು. ಪೂಜೆ ಬಳಿಕ ಶಿವರಾಜ್‍ಕುಮಾರ್ ಭಾವುಕರಾಗಿಯೇ ಮಾತನಾಡಿದರು.

ಕನಕನ ಕಿಂಡಿ ನೋಡುವಾಗ ಭಕ್ತ ಕನಕದಾಸ ಚಿತ್ರದಲ್ಲಿ ನಟಿಸಿದ್ದ ತಂದೆ ನೆನಪಾಗುತ್ತಾರೆ. ಉಡುಪಿಗೆ ಬಂದಾಗಲೆಲ್ಲಾ ಶ್ರೀಕೃಷ್ಣ ಮಠಕ್ಕೆ ಬರುತ್ತೇನೆ ಎಂದು ಶಿವಣ್ಣ ಹೇಳಿದರು. ಅಲ್ಲದೆ, ಪೇಜಾವರ ಶ್ರೀಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ ಶಿವಣ್ಣ ಅವರೊಬ್ಬರು ಒಳ್ಳೆಯ ಮನುಷ್ಯ. ನನ್ನ ಮಗಳ ಮದುವೆ ಬಂದು ಶ್ರೀಗಳು ಹರಸಿ ಹೋಗಿದ್ದವರು ಎಂದು ನೆನಪಿಸಿಕೊಂಡರು.

ಇದಕ್ಕೂ ಮೊದಲು ಪರ್ಯಾಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಶಿವರಾಜ್‍ಕುಮಾರ್ ದಂಪತಿಯನ್ನು ಸನ್ಮಾನಿಸಿ ಅನುಗ್ರಹ ಮಂತಾಕ್ಷತೆ ನೀಡಿದರು.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!